ಕೊಪ್ಪಳ ನಗರಸಭೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ

Get real time updates directly on you device, subscribe now.

: ಕೊಪ್ಪಳ ನಗರಸಭೆಯಿಂದ ಆಗಸ್ಟ್ 15ರಂದು 77ನೇ ಸ್ವಾತಂತ್ರ್ಯೋತ್ಸವ  ಆಚರಿಸಲಾಯಿತು.

ನಗರಸಭೆ ಕಾರ್ಯಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಪ್ರಯುಕ್ತ ಕೊಪ್ಪಳ ನಗರಸಭೆಯಿಂದ ಮಕ್ಕಳಿಗೆ ಶಾಲಾ ಕಲಿಕಾ ಸಾಮಗ್ರಿಗಳ ವಿತರಣೆಗೆ ಅಧ್ಯಕ್ಷರು ಹಾಗೂ ಸದಸ್ಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್, ಸದಸ್ಯರಾದ ಅಮ್ಜದ್ ಪಟೇಲ್, ಮಹೇಂದ್ರ ಛೋಪ್ರಾ, ಸರ್ವೇಶಗೌಡ, ಚನ್ನಪ್ಪ ಕೋಟೆಹಾಳ, ಸಿದ್ದು ಮ್ಯಾಗೇರಿ, ವಿರುಪಾಕ್ಷಪ್ಪ ಮೊರನಾಳ, ಮುತ್ತುರಾಜ್ ಕುಷ್ಟಗಿ, ಪರುಶುರಾಮ, ಲತಾ ಚಿನ್ನೂರು, ದುರ್ಗಮ್ಮ ಹಾಗೂ ಇತರ ಸದಸ್ಯರು, ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!