ಜೀನಿಯಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Get real time updates directly on you device, subscribe now.


ಕೊಪ್ಪಳ ಅ. ೧೬: ನಗರದ ಕುಷ್ಟಗಿ ರಸ್ತೆಯಲ್ಲಿರುವ ಜೀನಿಯಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಧ್ವಜಾರೋಹಣ ನೆರವೇರಿಸಿ, ದೇಶಪ್ರೇಮ, ಸ್ವಾತಂತ್ರ ಹೋರಾಟಗಾರರ ಚರಿತ್ರೆ ಬಗ್ಗೆ ಅಭಿಮಾನ ಹೊಂದಬೇಕೆಂದು ಮಕ್ಕಳಿಗೆ ತಿಳಿಸಿದರು. ಜೊತೆಗೆ ನಾವು ಇಂದು ಸ್ವಾತಂತ್ರ್ಯ ಮತ್ತು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಅವರ ತ್ಯಾಗ ಬಲಿದಾನಗಳೇ ಕಾರಣ. ಅವರನ್ನು ಸದಾ ಸ್ಮರಿಸುವುದೇ ನಾವು ಅವರಿಗೆ ನೀಡುವ ಗೌರವವಾಗಿದೆ. ಸದರಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ನಾಗರಾಜ ಚಿಲವಾಡಗಿ, ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಪಾರ್ವತಿ ನೀಡಸೇಸಿ ಹಾಗೂ ಪಾಲಕರಾದ ದುರ್ಗಾರಾಮಜೀ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಯಶ್ರೀ ಹೊಸಮನಿ ಸ್ವಾಗತಿಸಿದರೆ, ವಂದನಾರ್ಪಣೆಯನ್ನು ಅಕ್ಷತಾ ಹಿರೇಮಠ ಅವರು ಮಾಡಿದರು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಸವಿತಾ ಜೋಷಿ ಅವರು ನೇರವೇರಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಸ್ವಾತಂತ್ರೋತ್ಸವ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!