ಕೊಪ್ಪಳ ವಿವಿ ಕುರಿತು -ಕೊಪ್ಪಳ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯಬೇಕು
ದೂರದ ಊರುಗಳಿಗೆ ಹೋಗಿ ಬಾಡಿಗೆ ಮನೆ, ಹಾಸ್ಟೆಲ್ ಗಳಲ್ಲಿ ಇದ್ದು ಉನ್ನತ ಶಿಕ್ಷಣ ಪಡೆಯುವುದು ಬಡವರ ಪಾಲಿಗೆ ಕಷ್ಟದ ಕೆಲಸ. ಇದೆ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಯುವಜನತೆ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಈ ಭಾಗದಲ್ಲಿ ಉನ್ನತ ಶಿಕ್ಷಣ ಪಡೆದವರ ಪ್ರಮಾಣವು ಕಡಿಮೆ ಇತ್ತು. ಬಳ್ಳಾರಿ ಕೃಷ್ಣದೇವರಾಯ ವಿವಿ ನಂತರ ಹೆಚ್ಚು ಜನರಿಗೆ ಉನ್ನತ ಶಿಕ್ಷಣ ಏಟುಕುವಂತಾಗಿತ್ತು. ಕೇವಲ ಆರ್ಥಿಕ ಕಾರಣವಿಟ್ಟು ಕೊಪ್ಪಳ ವಿವಿ ಮುಚ್ಚುವುದು ಸರಿಯಲ್ಲ. ವಿಶ್ವವಿದ್ಯಾಲಯ ಒಂದು ತೆರೆಯುವುದರಿಂದ ಅಲ್ಲಿಯ ಬಡಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳುವ ಅವಕಾಶದ ಜೊತೆ ಉದ್ಯೋಗ, ಸಂಶೋಧನೆಗೆ ಹೆಚ್ಚು ಒತ್ತುಕೊಟ್ಟಂತಾಗುತ್ತದೆ. ಅದ್ದರಿಂದ ಸರಕಾರ ಕೊಪ್ಪಳ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯಬೇಕು.
ಡಾ. ವೆಂಕಟೇಶ್ ಬಾಬು
ಗ್ರಾಪಂ ಸದಸ್ಯರು ಆನೆಗುಂದಿ
Comments are closed.