ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳಿಗೆ ಅಕ್ರಮವಾಗಿ ನೀರು : ಎಂ.ಆರ್.ವೆಂಕಟೇಶ್ ಖಂಡನೆ

0

Get real time updates directly on you device, subscribe now.

ಕೊಪ್ಪಳ : ತುಂಗಭದ್ರಾ ಜಲಾಶಯದಿಂದ ಮುನಿರಾಬಾದ್ ನೀರಾವರಿ ನಿಗಮದ ಕೇಂದ್ರ ವಲಯದ ಅಧಿಕಾರಿಗಳು ತುಂಗಭದ್ರಾ ಜಲಾಶಯದಿಂದ ಪ್ರಸ್ತುತ ಏಪ್ರಿಲ್ ತಿಂಗಳಲ್ಲೂ ಅಕ್ರಮವಾಗಿ ನೀರು ಸರಬರಾಜು ಮಾಡುವುದನ್ನು ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷರಾದ ವೆಂಕಟೇಶ್ ಎಂ ಆರ್ ತೀವ್ರವಾಗಿ ಖಂಡಿಸಿದ್ದಾರೆ.
ನೀರಾವರಿ ನಿಗಮದ ಅಧಿಕಾರಿಗಳು ಕಾರ್ಖಾನೆಗಳಿಗೆ ನೀರನ್ನು ಕೊಡಲು ಆಸ್ಪದ ಇಲ್ಲದಿದ್ದರೂ ಅಕ್ರಮವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಪ್ರಸ್ತುತ ಜಲಾಶಯದಲ್ಲಿ ೧೨ ಟಿಎಂಸಿ ನೀರು ಇದ್ದು, ಇದರಲ್ಲಿ ಜಲಾಶಯದ ಜಲಚರಗಳಿಗಾಗಿ ೨ಟಿಎಂಸಿ ಮೀಸಲಿದೆ. ಉಳಿದ ೧೦ಟಿಎಂಸಿಯಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು, ಜಲಾಶಯದ ಎಡ ಮತ್ತು ಬಲ ಭಾಗದ ವಿಜಯನಗರ ಕಾಲುವೆಗಳಿಗೆ ನಿಂತ ಬೆಳೆಗಳಿಗೆ ನೀರನ್ನು ಮೇ ತಿಂಗಳ ಅಂತ್ಯದವರೆಗೆ ಒದಗಿಸ ಬೇಕು. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಕಾರ್ಖಾನೆಗಳಿಗೆ ನೀರನ್ನು ಕೊಡಲು ಆಸ್ಪದ ಇಲ್ಲದಿದ್ದರೂ ಅಕ್ರಮವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಕುಡಿಯುವ ನೀರಿಗೆ ಕೊರತೆಯಾಗುವ ಸಂಭವ ಇದೆ. ನಿಂತ ಬೆಳೆಗೆ ನೀರಿನ ಕೊರತೆ, ಜಲಚರ ಮೀಸಲು ನೀರಿನಲ್ಲಿ ಕೊರಟೆಯಾಗುವ ಸಂಭವ ಇದೆ.
ಜಲಾಶಯದ ನೀರನ್ನು ಅಕ್ರಮವಾಗಿ ನೀಡುತ್ತಿರುವ ನೀರಾವರಿ ನಿಗಮದ ಮುಖ್ಯ ಅಭಿಯತರರು ಹಾಗೂ ಅಧೀಕ್ಷಕ ಅಭಿಯಂತರನ್ನು ಅಮಾನತುಗೊಳಿಸಿ, ತನಿಖೆ ನಡೆಸಬೇಕೆಂದು ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷರಾದ ವೆಂಕಟೇಶ್ ಎಂ ಆರ್ ಒತ್ತಾಯಿಸಿದ್ದಾರೆ . ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆಯ ನಡೆಸಲಾಗುವುದೆಂದು ಪ್ರಕಣೆಯಲ್ಲಿ ತಿಳಿಸಿರುತ್ತಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!