ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತ್ವರಿತಗತಿಯಲ್ಲಿ ನ್ಯಾಯ ಕೊಡಿಸುವ ಕಾರ್ಯವಾಗಬೇಕಿದೆ : ಹಿರಿಯ ಸಿವಿಲ್ ನ್ಯಾಯಾದೀಶ ಮಹಾಂತೇಶ ದರಗದ

ಕೊಪ್ಪಳ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯಿಂದ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ- ಅನುಷ್ಠಾನ ಕುರಿತು ಸಂರಕ್ಷಣಾಧಿಕಾರಿಗಳು ಹಾಗೂ ಇತರ ಭಾಗಿದಾರರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ತರತಬೇತಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮಹಾಂತೇಶ ದರಗದ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಸಮಾಜ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಕೌಟುಂಬಿಕ ದೌರ್ಜನ್ಯ, ಹಿಂಸೆಗೆ ಒಳಗಾಗುವ ಮಹಿಳೆಯರು ಹಿಂಜರಿಯದೆ ನ್ಯಾಯ ಕೇಳಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಉಚಿತ ಕಾನೂನು ನೆರವಿನೊಂದಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸುತ್ತದೆ. ನೊಂದ ಮಹಿಳೆಯರಿಗೆ ರಕ್ಷಣೆಯ ಜೊತೆಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡೋಣ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪರಶುರಾಮ್ ಶೆಟ್ಟೆಪ್ಪನವರ ಮಾತನಾಡಿ, ಮಹಿಳೆ ಸಮಾಜದ ಬೆಳಕು. ಲಿಂಗ ತಾರತಮ್ಯ ಮಾಡುವುದು ಬೇಡ. ಅವರು ಪುರುಷರಂತೆ ಸಮಾನರು. ಅದನ್ನು ಎಲ್ಲರೂ ಅರಿಯಬೇಕು. ಮಹಿಳಾ ಕಾನೂನುಗಳ ಅರಿವು ಮೂಡಿಸಬೇಕು. ದೌರ್ಜನ್ಯ, ಹಿಂಸೆ ನಡೆದಲ್ಲಿ ತಕ್ಷಣ ಕಾನೂನು ರಕ್ಷಣೆ ಪಡೆಯಲು ಮುಂದಾಗಬೇಕು ಎಂದರು. ಮಹಿಳೆಯರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಮ್ಮ ಇಲಾಖೆ ಸಹಕಾರ ಸದಾ ಇದೆ. ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳಿದ್ದು, ಅವುಗಳ ಸದುಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿ.ವಾಯ್.ಎಸ್ಪಿ. ಮುತ್ತಣ್ಣ, ತಹಶಿಲ್ದಾರ ವಿಠಲ್ ಚೌಗಲ್, ತಾಲೂಕು ಕಾರ್ಯವಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ವಕೀಲರಾದ ಚೈತ್ರಾ ಕೊಪ್ಪಳ, ಪ್ರದೀಪಕುಮಾರ್ ಉಡುಪಿ,ಪಿಎಸ್ಐ ಆಂಜಿನೆಯ,ಯುನಿಸೆಫ್ ವ್ಯವಸ್ಥಾಪಕರಾದ ಹರೀಶ ಜೋಗಿ ಹಾಗೂ ಸಂದೀಪ್,ಲಕ್ಷ್ಮೀ ಅವರು ತರಬೇತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಅನ್ನಪೂರ್ಣ ಕುಬಕಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಹಿಣಿ ಕೋಟಗಾರ, ಬೆಟದಪ್ಪ,ಜಯಶ್ರೀ, ವಿರೂಪಾಕ್ಷಿ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೂಪಾ ಗಂಧದ,ಶಿವ ಶರಣಪ್ಪ ಗದ್ದಿ,ಪ್ರಸನ್ನ, ಮಹಿಳಾ ಧ್ವನಿ ಸಂಸ್ಥೆಯ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ ಮತ್ತು ತಾಲೂಕಿನ ಹಿರಿಯ ಮೇಲ್ವಿಚಾರಕರು,ಸಾಂತ್ವನ ಕೇಂದ್ರದ ಕೌನ್ಸಲರ್ಸ,ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ತರಬೇತಿ ಪಡೆಯಲು ಬಂದ ಜಿಲ್ಲೆಯ ವಿವಿಧ ಇಲಾಖೆಯವರು ಉಪಸ್ಥಿತಿ ಇದ್ದರು.
Comments are closed.