MSPL ಕಂಪನಿ ವಿಸ್ತರಣೆಗೆ  ಗಿಣಿಗೇರಾ ನಾಗರೀಕ ಹೋರಾಟ ಸಮಿತಿ ವಿರೋಧ

Get real time updates directly on you device, subscribe now.

MSPL ಕಂಪನಿ ವಿಸ್ತರಣೆ  ಮಾಡಲು ಮುಂದಾದರೆ  ಜನರನ್ನು ಸಂಘಟಿಸಿ ಹೋರಾಟ ಮಾಡಲಾಗುತ್ತದೆ ಎಂದು ಗಿಣಿಗೇರಾ ನಾಗರೀಕ ಹೋರಾಟ ಸಮೀತಿ ಸಂಚಾಲಕರಾದ ಶರಣು ಗಡ್ಡಿ, ಮುಖಂಡರಾದ ಮಂಗಳೇಶ ರಾಠೋಡ್ ಕರೆ ನೀಡಿದ್ದಾರೆ.
ಈಗಾಗಲೇ ಗಿಣಿಗೇರಾ ಸುತ್ತಲೂ ದೈತ್ಯ ಕಂಪನಿಗಳು ನೆಲೆಯೂರಿ ಅಲ್ಪ ಸ್ವಲ್ಪ ಇದ್ದ ರೈತರ ಭೂಮಿ ಕೈಗಾರಿಕೊದ್ಯಮಿಗಳ ಪಾಲಾಗಿದೆ.  ಭೂಮಿಯೂ ಇಲ್ಲಾ ಕೆಲಸವು ಇಲ್ಲಾ ಆದರೆ ಜನರ ಅರೋಗ್ಯ ಹಾಳಾಗುತ್ತಿದೆ. ಇತ್ತೀಚ್ಚಿಗೆ ಇಸ್ಪಾತ್ ಕಾರ್ಖಾನೆಯಲ್ಲಿ ವಿಷಕಾರಿಕ ಅನಿಲ ಸೋರಿಕೆಯಿಂದ  ಇಬ್ಬರು ಕಾರ್ಮಿಕರು ಸಾವಿನ್ನಪಿರುವ ಘಟನೆ ಮಾಸಿಲ್ಲ.
ಇಂತ ಹಲವಾರು ಕಾರ್ಮಿಕರ ಜೀವಕ್ಕೆ ಬೆಲೆಯಿಲ್ಲ. ಇದು ಒಂದು ಕಡೆಯಾದರೆ,ಕಂಪನಿ ಹೇರಳ ಲಾಭಕೋಸ್ಕರ ಜನರ ಬದುಕನ್ನು ನಾಶಮಾಡುತ್ತಿರುವ  ಈ ಕಂಪನಿಗಳ ವಿರುದ್ಧದ ಹೋರಾಟ ಇವತ್ತನಿದ್ದಲ್ಲ. ಇಲ್ಲಿನ ನೆಲ, ಜಲ,ಶುದ್ಧ ಗಾಳಿ, ಶಬ್ದ ಮಾಲಿನ್ಯ, ಪರಿಸರವನ್ನು ಹಾಳುಮಾಡಿ ಕಂಪನಿ ವಿಸ್ತರಣೆ ಮಾಡುತ್ತಿರುವುದು ಯಾರ ಉದ್ದಾರಕ್ಕಾಗಿ.
ಈಗಾಗಲೇ ಪರಿಸರ ಹಾಳುಮಾಡಿರುವುದೇ ಸಾಕಾಗಿದೆ ನಿಜವಾಗಲೂ ಜನರ ಬಗ್ಗೆ ಕಾಳಜಿಯಿದ್ದರೆ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಬೋಲ್ಡಟ ಕಂಪನಿ ವಿಸ್ತರಣೆ ಮಾಡುವುದನ್ನು ತಡೆಗಟ್ಟಿ. ಪರಿಸರ ಸರ್ವ ನಾಶ ಮಾಡುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ.
ನಮ್ಮ  ನೆಲ,ಜಲ,ಶುದ್ಧ ಗಾಳಿ, ಶುದ್ಧ ಪರಿಸರ, ಉತ್ತಮ ಜನರ ಅರೋಗ್ಯ ಕೋಸ್ಕರ ಹುಟ್ಟಿಕೊಂಡ ಗಿಣಿಗೇರಾ ನಾಗರೀಕ ಹೋರಾಟ ಸಮಿತಿ ನಿತ್ಯ ನಿರಂತರ ಜನರ ಹಿತಕೋಸ್ಕರ ಧ್ವನಿ ಎತ್ತಿದೆ.

MSPL ಕಂಪನಿ ವಿಸ್ತರಣೆ  ಮಾಡಲು ಮುಂದಾದರೆ  ಜನರನ್ನು ಸಂಘಟಿಸಿ ಹೋರಾಟ ಮಾಡಲಾಗುತ್ತದೆ ಎಂದು ಗಿಣಿಗೇರಾ ನಾಗರೀಕ ಹೋರಾಟ ಸಮೀತಿ ಸಂಚಾಲಕರಾದ ಶರಣು ಗಡ್ಡಿ, ಮುಖಂಡರಾದ ಮಂಗಳೇಶ ರಾಠೋಡ್ ಕರೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!