ಕೊಪ್ಪಳದ ಇಬ್ಬರು ಕೃತಿಕಾರರಿಗೆ ಕರ್ನಾಟಕ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ
ಕೊಪ್ಪಳ ಫೆ.೧೨: ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಿಂದ ೨೦೨೩ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿಗೆ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಕನ್ನಡಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್‌ಇವರಕೊಪ್ಪಳ ಚರಿತ್ರೆ ಮತ್ತು ಸಂಸ್ಕೃತಿಯ ಹುಡುಕಾಟಎಂಬ ಸಂಶೋಧನಾಕೃತಿಯು ಸೃಜನೇತರ ವಿಭಾಗದಲ್ಲಿ ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾಗಿದೆ.ಇದರಜೊತೆಗೆ ಮಕ್ಕಳ ಸಾಹಿತಿ ಹಾಗೂ ಶಿಕ್ಷಕಿಯಾಗಿರುವ ಶ್ರೀಮತಿ ಅರುಣಾ ನರೇಂದ್ರಅವರಗದ್ದಲದೊಳಗ್ಯಾಕ ನಿಂತಿತತ್ವಪದಗಳ ಸಂಕಲನವು ಸೃಜನ ವಿಭಾಗದಲ್ಲಿ ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾಗಿದೆ.ಅಲ್ಲದೇಆಂಧ್ರಪ್ರದೇಶದಕುಪ್ಪಂನದ್ರಾವಿಡಿಯನ್ ವಿಶ್ವವಿದ್ಯಾಲಯದಕನ್ನಡ ಪ್ರಾಧ್ಯಾಪಕರಾದಡಾ.ಮಲ್ಲೇಶಪ್ಪ ಸಿದ್ರಾಂಪೂರಇವರಪಡಿನೆರಳುವಿಮರ್ಶಾಕೃತಿಯೂ ಸಹ ಗಡಿನಾಡುಕನ್ನಡಿಗರಲೇಖಕರ ಪ್ರಶಸ್ತಿಗೆ ಆಯ್ಕೆಯಾಗಿದೆ.ಈ ಕೃತಿಯನ್ನುಕೊಪ್ಪಳದ ಮೇಘನಾ ಪ್ರಕಾಶನದಿಂದ ಪ್ರಕಟಿಸಲಾಗಿದೆ.ಈ ಪ್ರಶಸ್ತಿಯು ಫಲಕ ಮತ್ತು ನಗದು ಬಹುಮಾನವನ್ನು ಹೊಂದಿದ್ದು ಫೆಬ್ರುವರಿ೧೫ರಂದು ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿಜರುಗಲಿರುವಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು.ಕೃತಿಕಾರರಿಗೆ ಕೊಪ್ಪಳ ಜಿಲ್ಲೆಯಸಾಹಿತ್ಯ ಬಳಗ, ಸ್ನೇಹಿತರುಮತ್ತುಸಕಲ ವಿದ್ಯಾರ್ಥಿ ಬಳಗ ಅಭಿನಂದಿಸಿದೆ.
Comments are closed.