ಕುಖ್ಯಾತ ಮನೆ ಕಳ್ಳತನ ಆರೋಪಿ ಬಂಧನ 4 ಪ್ರಕರಣಗಳ ಪತ್ತೆ

Get real time updates directly on you device, subscribe now.

ಗಂಗಾವತಿ : ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಬಂದಿಸಿ ೯ ಲಕ್ಷ ಮೌಲ್ಯದ ಬಂಗಾರ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿತರ ಪತ್ತೆಗಾಗಿ ನಗರ ಠಾಣೆಯ ಸಿಪಿಐ ಪ್ರಕಾಶ ಮಾಳಿ ನೇತೃತ್ವದ ತಂಡ ರಚಿಸಲಾಗಿತ್ತು.
ಆರೋಪಿತರ ಸುಳಿವು ಕುರಿತು ಮಾಹಿತಿ ಸಂಗ್ರಹಿಸಿ ಕನಕಗಿರಿಯ ಬಜಂತ್ರಿ ಓಣಿಯ ಹನುಮೇಶ ಬಜಂತ್ರಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೇವಲ ಗಂಗಾವತಿ ಅಷ್ಟೇ ಅಲ್ಲದೆ ಬದಾಮಿ ಪೊಲೀಸ್ ಠಾಣೆಯ 2, ಹಾವೇರಿ ಜಿಲ್ಲೆಯ ಸವಣೂರ ಪೊಲೀಸ್ ಠಾಣೆಯ 1 ಪ್ರಕರಣ ಒಟ್ಟು ೪ ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು 101 ಗ್ರಾಂ ತೂಕದ ಬಂಗಾರದ ಒಡವೆಗಳು ಅಂದಾಜು ಮೌಲ್ಯ 8,78,000 ಹಾಗೂ ನಗದು ಹಣ 32,300 ರೂ ಸೇರಿ ಒಟ್ಟು 9,10,300-00 ಮೌಲ್ಯದ ಬಂಗಾರ ಹಾಗೂ ನಗದನ್ನು ಜಪ್ತಿ ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ತನಿಖಾ ತಂಡಕ್ಕೆ
ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ್ ಎಲ್ ಅರಸಿದ್ದಿ ಬಹುಮಾನ ಘೋಷಣೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!