ಆಂಜನಾದ್ರಿ ವಿವಿಧ ಅಭಿವೃದ್ಧಿ ಯೋಜನೆಗೆ ಅನುಮೋದನೆ ಶೀಘ್ರದಲ್ಲಿಯೇ ಚಾಲನೆ- ಗಾಲಿ ಜನಾರ್ದನ ರೆಡ್ಡಿ
ಇಂದು ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿಯ ಆನೆಗೊಂದಿ ಭಾಗದ ಗ್ರಾಮಗಳ ಅಂದಾಜು 51.01ಲಕ್ಷ ರೂ.ಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿ 250 ಕೋಟಿ ರೂಗಳ ವೆಚ್ಚದಲ್ಲಿ ಆಂಜನಾದ್ರಿ ದೇವಾಲಯದ ಸುತ್ತ ಮಂಟಪ, ಪ್ರಸಾದ ನಿಲಯ, ಪ್ರದಕ್ಷಿಣೆ ಪಥ, ವಾಲ್ಮೀಕಿ ಮಂಟಪ, ಸ್ನಾನಘಟ್ಟ ಸೇರಿದಂತೆ ವಿವಿಧ ಅಭಿವೃದ್ಧಿಗೆ ಯೋಜನೆಗೆ ಈಗಾಗಲೇ ಸರ್ಕಾರದ ಅನುಮೋದನೆ ಸಿಕ್ಕಿದ್ದು ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. ಆಂಜನಾದ್ರಿ ದೇವಾಲಯ ಅಭಿವೃದ್ಧಿಯಾಗುವುದರಿಂದ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ, ಇದರಿಂದ ಆನೆಗುಂದಿ ಸೇರಿದಂತೆ ಸುತ್ತಲಿನ ಭಾಗದ ಜನರಿಗೆ ಉದ್ಯೋಗ, ವ್ಯಾಪರಕ್ಕೆ ಅನುಕೂಲವಾಗಲಿದೆ ಎಂದು ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಯು.ನಾಗರಾಜ್, ಆನೆಗೊಂದಿ ಗ್ರಾಂ.ಮ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ್, ಸಂಗಾಪುರ ಗ್ರಾ.ಪಂ ಮಂಜಮ್ಮ ಲೋಕೇಶ್, ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ್, ಟಿ.ಜಿ ಬಾಬು, ಮಂಜುನಾಥ್ ಕಲಾಲ್, ಲಕ್ಷ್ಮಣ ನಾಯಕ್, ಬಾಬು ರೆಡ್ಡಿ, ಶ್ರೀನಿವಾಸ್ ಕೊರಮ್ಮ ಕ್ಯಾಂಪ್, ಮನೋಹರ್ ಗೌಡ ಹೇರೂರು, ಯಮನೂರ್ ಚೌಡ್ಕಿ, ವೀರೇಶ್ ಬಲಕುಂದಿ, ವೆಂಕಟೇಶ್ ಜಬ್ಬಲಗುಡ್ಡ, ನಾಗರಾಜ್ ಚಳಗೇರಿ, ಮಹಿಳಾ ಮುಖಂಡರಾದ ರಾಜೇಶ್ವರಿ ಹಾಗೂ ಕಾರ್ಯಕರ್ತರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.