ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗಳಲ್ಲಿ ಧೂಳಿಪಟವಾಗುವುದು ನಿಶ್ಚಿತ- CVC

Get real time updates directly on you device, subscribe now.

ದಿಲ್ಲಿಯಂತೆ ಇಲ್ಲೂ ಕಾಂಗ್ರೆಸ್ ಪತನ ನಿಶ್ಚಿತ: ಸಿವಿಸಿ

ಕೊಪ್ಪಳ: ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷವನ್ನು ಸೋಲಿಸುವ ಮೂಲಕ ದಿಲ್ಲಿ ಮತದಾರರು
ಎನ್ ಡಿ ಎ ಒಕ್ಕೂಟದ ಪರವಾದ‌ ಒಲವನ್ನು ವ್ಯಕ್ತಪಡಿಸಿರುವುದು ಮುಂದಿನ ರಾಜಕೀಯದ ದಿಕ್ಸೂಚಿ ಎಂದು ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದ್ದಾರೆ.
“ಆರ್ಥಿಕತೆಯ ಹಳಿ ತಪ್ಪಿಸುವ ಉಚಿತ ಕಾರ್ಯಕ್ರಮಗಳನ್ನು ಮತದಾರರು ತಿರಸ್ಕರಿಸಿರುವುದು ಗಮನಾರ್ಹ ಬೆಳವಣಿಗೆ. ಲಭ್ಯವಿರುವ ಎಲ್ಲಾ ಹಣಕಾಸಿನ ಸಂಪನ್ಮೂಲಗಳು ಉಚಿತ ಯೋಜನೆಗೆ ವಿನಿಯೋಗಗೊಂಡು ಅಭಿವೃದ್ಧಿಗೆ ಹಣ ಇಲ್ಲವಾಗಿ ದುರಾಡಳಿತಕ್ಕೆ ಕಾರಣವಾಗುತ್ತಿರುವುದು ಕರ್ನಾಟಕದಲ್ಲಿ ಈಗಾಗಲೇ ಸಾಬೀತಾಗಿದೆ. ಕರ್ನಾಟಕದಲ್ಲಿ 10 ವರ್ಷಗಳಷ್ಟು ಅಭಿವೃದ್ಧಿ ಪ್ರಕ್ರಿಯೆ ಹಿಂದೆ ಸಂಚರಿಸಿದೆ. ಅಭಿವೃದ್ಧಿ ಕಡೆಗಿನ ನಿರ್ಲಕ್ಷದ ವಿರುದ್ಧ ಜನಾಕ್ರೋಶ ರೂಪಗೊಳ್ಳುತ್ತಿದೆ. ಉಚಿತ ಯೋಜನೆಗಳನ್ನು ಅಧಿಕಾರ ದಾಹಕ್ಕಾಗಿ ಜಾರಿ ಮಾಡುವ ಅಜೆಂಡಾಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ದಿಲ್ಲಿ ಮತದಾರ ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾನೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಕಾಂಗ್ರೆಸ್ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷಗಳ ದೇಶ ವಿರೋಧಿ ನೀತಿಗಳು ಹಾಗೂ ಅಭಿವೃದ್ಧಿ ಕಡೆಗಿನ ನಿರ್ಲಕ್ಷದ ವಿರುದ್ಧ ಮತದಾರ ಮತ ಚಲಾಯಿಸಿದ್ದಾನೆ. ದಿಲ್ಲಿ ಜನತೆಯ ನಿರ್ಧಾರ ಎನ್ ಡಿ ಎ ಒಕ್ಕೂಟದ ಪರವಾಗಿನ ಜನದೇಶ. ಅಲ್ಲಿ ಧೂಳಿಪಟವಾದಂತೆ ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ಮರೆತು ದುರಾಡಳಿತದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗಳಲ್ಲಿ ಧೂಳಿಪಟವಾಗುವುದು ನಿಶ್ಚಿತ,” ಎಂದು ಹೇಳಿದ್ದಾರೆ

Get real time updates directly on you device, subscribe now.

Comments are closed.

error: Content is protected !!