ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಳವಂಡಿಯ ಸಿದ್ದೇಶ್ವರ ಮಹಾರಥೋತ್ಸವ

Get real time updates directly on you device, subscribe now.

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಳವಂಡಿಯ ಸಿದ್ದೇಶ್ವರ ಮಹಾರಥೋತ್ಸವ

ಅಳವಂಡಿ :  ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಆರಾಧ್ಯ ದೈವ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಾಯಂಕಾಲ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಭಕ್ತಿ, ಸಂಭ್ರಮ ಸಡಗರದಿಂದ  ಅದ್ಧೂರಿಯಾಗಿ ನೆರವೇರಿತು.

ಭಾನುವಾರ ಬೆಳಿಗ್ಗೆಯಿಂದ ಸಿದ್ಧೇಶ್ವರ ಮೂರ್ತಿಗೆ ವಿಶೇಷ ಪೂಜೆ, ಮಹಾ ರುದ್ರಾಭಿಷೇಕ ನಡೆಯಿತು. ಜಾತ್ರೆಗೆ ಬಂದ ಭಕ್ತರು ಸಿದ್ದೇಶ್ವರ ದೇವರಿಗೆ ಕಾಯಿ, ಕರ್ಪೂರ ಹಾಗೂ ನೈವೇದ್ಯ ಸಲ್ಲಿಸಿದರು. ಇದೇ  ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸಾಯಂಕಾಲ ಮಠದ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಧ್ವಜಾರೋಹಣ ನೆರವೇರಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಹಾಗೂ ಎಸೆದು ಭಕ್ತಿ ಸಮರ್ಪಿಸಿದರು.  ಮಹಾ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಪೋಲಿಸ್ ಇಲಾಖೆಯ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವ ಯಶಸ್ವಿಯಾಗಿ ಮರಳಿ ಸ್ಥಳಕ್ಕೆ ಬಂದು ನಿಂತಾಗ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಜಾತ್ರೆಗೆ ಬಂದ ಭಕ್ತರು ಸಿಹಿ ಬೂಂದಿ, ಜಿಲೇಬಿ, ರೊಟ್ಟಿ, ಕಾಳು ಪಲ್ಯೆ, ಬದನೆಕಾಯಿ ಪಲ್ಯ ಹಾಗೂ ಅನ್ನ ಸಾಂಬಾರ್ ಸವಿದರು. ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಕರಡಿ ಸಂಗಣ್ಣ, ಜೆಡಿಎಸ್  ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ , ಅಳವಂಡಿ ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು  ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!