ಪ್ರಗತಿಪರ ರೈತ ಏಳುಕೋಟೇಶ್ ಮಗನಿಗೆ ಚಿನ್ನದ ಪದಕ

ಕೊಪ್ಪಳ:ಇಂದು ನೆಡೆದ ಮೈಸೂರಿನಲ್ಲಿ ಕರ್ನಾಟಕ. ರಾಜ್ಯ ಅಂಗವಿಕಲ ಕ್ರೀಡಾ ಸಂಸ್ಥೆ ಇವರು ಆಯೋಜಿಸಿದ . 33ನೇ ರಾಜ್ಯ ಅತ್ಲೆಟಿಕ್ ಚಾಂಪಿಯನ್ ಶಿಪ್ ಹಾಗೂ 24 ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಶಿಪ್ ಗೆ ಆಯ್ಕೆ ಮಾಡುವ ಕ್ರೀಡಾ ಕೂಟದಲ್ಲಿ ,ತಾಲೂಕಿನ ಬೆಟಗೇರಿಯ ಗ್ರಾಮದ ಪ್ರಗತಿಪರ ರೈತ ಏಳುಕೋಟೇಶ ಕೋಮಲಾಪುರ ಅವರ ಮಗ ಶಿವಕುಮಾರ ಕೋಮಲಾಪುರ ಚಿನ್ನದ ಪದಕ ಗಳಿಸಿದ್ದಾನೆ.
ಶಿವಮೊಗ್ಗದ ಬಿ.ವಿ ಎಸ್ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಶಿವಕುಮಾರ್ ಜಿಲ್ಲೆಯ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದು ಕ್ರೀಡಾಕೂಟದ ಉದ್ದ ಜಿಗಿತ ಹಾಗೂ ಭರ್ಚಿ ಎಸೆತದಲ್ಲಿ ವಿಜೇತನಾಗುವ ಮೂಲಕ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾನೆ.
ಉದ್ದ ಜಿಗಿತದಲ್ಲಿ 5.03 ಮೀಟರ್ ಜಿಗಿದಿರುವ ಶಿವಕುಮಾರ್, ಭರ್ಚಿ ಎಸೆತದಲ್ಲಿ 37 ಮೀಟರ್ ಉದ್ದಕ್ಕೆ ಎಸೆಯುವ ಮೂಲಕ, ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗಿಟ್ಟಿಸಿದ್ದಾನೆ.
ಫೊಟೊ: ಶಿವಕುಮಾರ ಕೋಮಲಾಪುರ
(ಸಂಪರ್ಕ: 7619399299 / 9900187322)
Comments are closed.