ಬೀದಿ ವ್ಯಾಪಾರಿಗಳ ಸ್ಥಳಾಂತರವನ್ನು ಕೈಬಿಡಲು ಒತ್ತಾಯಿಸಿ ನಗರಸಭೆಗೆ ಮನವಿ. : ವಿಜಯ್ ದೊರೆರಾಜು

Get real time updates directly on you device, subscribe now.

ಗಂಗಾವತಿ: ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಫೆಬ್ರವರಿ-೦೬ ರಂದು ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ಎ.ಐ.ಸಿ.ಸಿ.ಟಿ.ಯು ಕೊಪ್ಪಳ ಜಿಲ್ಲಾಧ್ಯಕ್ಷರಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ನಮ್ಮ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಟನೆಯು ಹಲವಾರು ವರ್ಷಗಳಿಂದ ಗಂಗಾವತಿಯ ಬೀದಿ ವ್ಯಾಪಾರಿಗಳನ್ನು ಸಂಘಟನೆ ಮಾಡಿಕೊಂಡು ಬಂದಿದ್ದು, ಅವರ ಜೀವನ, ಜೀವನೋಪಾಯ ಮತ್ತು ಘನತೆಗಾಗಿ ಸತತವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿರುತ್ತದೆ. ಪ್ರಸ್ತುತ ಬೀದಿ ವ್ಯಾಪಾರಿಗಳನ್ನು ಅವರು ವ್ಯಾಪಾರ ಮಾಡುವ ಸ್ಥಳದಿಂದ ಎತ್ತಂಗಡಿ ಮಾಡದೇ ಈಗಿದ್ದ ಸ್ಥಳದಲ್ಲಿಯೇ ಅವರುಗಳು ವ್ಯಾಪಾರ ಮಾಡಲು ಅವಕಾಶ ನೀಡಲು ಒತ್ತಾಯಿಸುತ್ತೇವೆ. ಈಗಿರುವ ಸ್ಥಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಜನಸಂಚಾರ ಇರುವುದರಿಂದ ವ್ಯಾಪಾರ ಚೆನ್ನಾಗಿ ಆಗುತ್ತಿದ್ದು, ಆದರೆ ಇಲ್ಲಿಂದ ಸ್ಥಳಾಂತರಿಸಿದರೆ ಅವರ ವ್ಯಾಪಾರ ಕುಂಟಿತಗೊಂಡು ತೀವ್ರ ಆರ್ಥಿಕ ತೊಂದರೆಯಿಂದ ಅವರ ಕುಟುಂಬಗಳು ಬೀದಿಪಾಲಾಗಲಿವೆ. ಕಾರಣ ಬೀದಿ ವ್ಯಾಪಾರಿಗಳ ರಕ್ಷಣಾ ಕಾಯ್ದೆ ೨೦೧೪ ರಂತೆ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಿ ಬದುಕಲು ಅವಕಾಶ ನೀಡಬೇಕೆಂದು ನಗರಸಭೆಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಯಾರ್ಲ ಸಂಘಟನೆಯ ಕೆಂಚಪ್ಪ ಹಿರೇಖೇಡ, ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ್, ತಾಲೂಕ ಅಧ್ಯಕ್ಷ ಸೈಯ್ಯದ್ ಬುರಾನುದ್ದೀನ್, ಕಟ್ಟಡ ಕಾರ್ಮಿಕರ ಸಂಘಟನೆಯ ತಾಲೂಕ ಅಧ್ಯಕ್ಷ ಚಾಂದಪಾಷಾ, ಬೀದಿ ವ್ಯಾಪಾರಿಗಳಾದ ಕರೀಂಬೇಗ್, ಬಸವರಾಜ, ಯೂನುಸ್, ಮೈನು, ಹುಲುಗಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!