ಭೀಮವ್ವ ಶಿಳ್ಳಿಕ್ಯಾತರಗೆ ಪದ್ಮಶ್ರೀ ಪ್ರಶಸ್ತಿ : ನಾಗಭೂಷಣ್ ಸಾಲಿಮಠ ಸನ್ಮಾನ

Get real time updates directly on you device, subscribe now.

ಕೊಪ್ಪಳ:  2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಶತಾಯುಷಿ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳಿಕ್ಯಾತರ ಅವರನ್ನು ಕೊಪ್ಪಳ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ನಾಗಭೂಷಣ ಸಾಲಿಮಠ ಸನ್ಮಾನಿಸಿ ಗೌರವಿಸಿದರು.
     ನಂತರ ಮಾತನಾಡಿ ಶತಾಯುಷಿ ಭೀಮವ್ವ ಅಜ್ಜಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ “ನಶಿಸಿ ಹೋಗುತ್ತಿರುವ ಕಲೆಗೆ ಮರು ಜೀವ ತುಂಬಿದ  ಕೊಪ್ಪಳದ ಹಿರಿಮೆಯನ್ನು ದೇಶ ವಿದೇಶದ್ಯಾಂತ ಪಸರಿಸಿದೆ. ಅವರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ,” ಯಾಗಲಿ ಎಂದು ಹೇಳಿದರು.
  ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಪ್ರಕಾಶ್ ಚಿನ್ವಾಲರ, ಗುರುರಾಜ್ ಗಾಂಜಿ, ಜಗದೀಶ್ ಹಿರೇಮಠ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!