ಆರ್ಥಿಕತೆಗೆ ಪೂರಕವಾದ ಬಜೆಟ್: ಸಿವಿಸಿ ಪ್ರಶಂಸೆ

0

Get real time updates directly on you device, subscribe now.

ಕೊಪ್ಪಳ: ತೀವ್ರ ಆರ್ಥಿಕ ಬೆಳವಣಿಗೆ ದಾಖಲಿಸುತ್ತಿರುವ ಭಾರತವನ್ನು ಬೃಹತ್ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಸಾಧ್ಯತೆಯನ್ನು ಕೇಂದ್ರ ಬಜೆಟ್ ಹೊಂದಿದೆ ಎಂದು ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಮ ವರ್ಗದವರ ಮೇಲಿನ ಗಮನ ಉಳಿತಾಯಕ್ಕೆ ಕಾರಣವಾಗಿ ತನ್ನ ಮೂಲಕ ಆರ್ಥಿಕತೆಯನ್ನು ಇಂದು ಮಂಡಿಸಿದ ಕೇಂದ್ರ ಬಜೆಟ್ ಉತ್ತೇಜಿಸುತ್ತದೆ. ಮದ್ಯಮ ವರ್ಗದ ಹಣಕಾಸು ಶಕ್ತಿಯನ್ನು ಹೆಚ್ಚಿಸುತ್ತದೆ. ಸುಮಾರು 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಗಮನಾರ್ಹ. ಅಭಿವೃದ್ಧಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಬಡವರು. ರೈತರು, ಮಹಿಳೆಯರು, ಯುವಕರು, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ದುಡಿಯುವ ಕೈಗಳಿಗೆ ವಿಪುಲವಾದಂತ ಅವಕಾಶ ಕೊಟ್ಟಿರುವ ಬಜೆಟ್. ತನ್ನದೇ ತಾಂತ್ರಿಕತೆಗೆ ಸಂಶೋಧನೆಗೆ ವಿಶೇಷವಾಗಿ ಕೃಷಿಯನ್ನು ಆತ್ಮ ನಿರ್ಭರ ಮಾಡುವ ಬಜೆಟ್. ಯೂರಿಯಾ ಗೊಬ್ಬರ, ಬೀಜ, ಉತ್ಪಾದನೆಯಲ್ಲಿ ನಾವು ಸಂಪೂರ್ಣವಾಗಿ ಆತ್ಮನಿರ್ಭರವಾಗಲು ಅವಕಾಶ ನೀಡಲಾಗಿದೆ. ಹಳ್ಳಿಗಾಡಿನಲ್ಲಿ ಸ್ವಯಂ ಉದ್ಯೋಗವಕಾಶ, ಹಳ್ಳಿಗಳಿಂದ ಶಹರಕ್ಕೆ ಹೋಗುವುದನ್ನು ತಡೆಯಲಯ ಕ್ರಮ. ರೈಲ್ವೆ, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಆರೋಗ್ಯ ವಲಯದಲ್ಲಿ ಕ್ಯಾನ್ಸ‌ರ್ ನಿಯಂತಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷ ಎಂದರು. “ಡಿಜಿಟಲ್‌ ಮೂಲ ಸೌಕರ್ಯಗಳಿಗೆ, ಗ್ರಾಹಕರಿಂದ ಖರೀದಿ ಖರ್ಚುಗಳಿಗೆ ಒಟ್ಟಾರೆ ಚಿಲ್ಲರೆ ವ್ಯಾಪಾರದ ಪರಿಸರ ವ್ಯವಸ್ಥೆಗೆ ಬಲವಾದ ಉತ್ತೇಜನ ನೀಡಲಿದೆ. ಭಾರತ್ ನೆಟ್ ಅಡಿಯಲ್ಲಿ 5G ತರಂಗಾಂತರದ ನಿರಂತರ ವಿಸ್ಯರಣೆಗೆ ಒತ್ತು ಮತ್ತು ಡಿಜಿಟಲ್‌ ಮೂಲಸೌಕರ್ಯ ಸಂಪರ್ಕ ಸಾಧ್ಯತೆಗಳನ್ನು ಹೆಚ್ಚಿಸಲಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಉಪಕರಣಗಳ ಅಳವಡಿಕೆಗೆ ಚಾಲನೆ ನೀಡಲಿದೆ,” ಎಂದು ಹೇಳಿದ್ದಾರೆ.
ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂ. 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಘೋಷಿಸಲಾಗಿದ್ದು, ಇದರಿಂದ ಕರ್ನಾಟಕಕ್ಕೂ 7ರಿಂದ 8 ಸಾವಿರ ಕೋಟಿ ರೂ. ಸಾಲ ದೊರೆಯುವ ಸಾಧ್ಯತೆ ಇದೆ. ಅಭಿವೃದ್ಧಿ ಪರ ಬಜೆಟ್, ಆದ್ದರಿಂದ 2025-26 ರ ಹೊತ್ತಿಗೆ ಶೇ 7 ರಿಂದ 8 ರ ವರೆಗೆ ಜಿಡಿಪಿ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ತೆರಿಗೆಯಲ್ಲಿ ಬಹಳ ಸರಳೀಕರಣ ಮಾಡಲಾಗಿದೆ. ಕಸ್ಟಮ್ಸ್ ನಲ್ಲಿ ಸರಳಿಕರಣ ಮಾಡಲಾಗಿದೆ. ವಿಶೇಷವಾಗಿರುವ ಕ್ಯಾನ್ಸರ್, ಎಲೆಕ್ಟ್ರಾನಿಸ್, ಮೆಡಿಕಲ್ ಸೈನ್ಸನ್, ನವ ತಂತಜ್ಞಾನಕ್ಕೆ ಬಹಳಷ್ಟು ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!