ಬಜೆಟ್ ದೇಶದ ಜನರಿಗೆ ಬಂಪರ್ ಕೊಡುಗೆಯನ್ನು ನೀಡಿದೆ- ನವೀನ್
ಈ ಸಾಲಿನ ಬಜೆಟ್ ದೇಶದ ಜನರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 12 ಲಕ್ಷದ ವರೆಗೂ ತೆರಿಗೆ ಮುಕ್ತ ಮಾಡಿರೋದು ಮಧ್ಯಮ ವರ್ಗದವರಿಗೆ ಉಳಿತಾಯ ಮತ್ತು ಹೂಡಿಕೆಗೆ ಒಳ್ಳೆಯ ಅವಕಾಶ ದೊರಕಿದೆ. ಮೂಲ ಸೌಕರ್ಯ ಅಭಿವೃದ್ಧಿ, ಮೆಟ್ರೊ, ರೈಲ್ವೆ ನೆಟ್‌ವರ್ಕ್, ಮಲ್ಟಿ ಮಾಡೆಲ್ ಕಾರಿಡಾರ್‌ಗಳು ಮತ್ತು ನಗರ ಸುತ್ತುಮುತ್ತಲು ವಾಣಿಜ್ಯೋದ್ದೇಶದ ರಿಯಾಲ್ಟಿ ಚಟುವಟಿಕೆಗಳ ಉತ್ತೇಜನಕ್ಕೆ ನೆರವು ನೀಡಿರುವುದು ಹರ್ಷದಾಯಕ ಎಲ್ಲಾ ಸರ್ಕಾರಿ ಶಾಲೆಗಳಿಗೂ ಬ್ರಾಂಡ್‌ಬ್ಯಾಂಡ್ ಸಂಪರ್ಕ. ಜಲಜೀವನ ಮಿಷನ್ ಯೋಜನೆ ಇನ್ನಷ್ಟು ವಿಸ್ತರಣೆ ಸರ್ಕಾರಿ ಶಾಲೆಯ ಗುಣಮಟ್ಟವನ್ನು ಹೆಚ್ಚಿಸಿದೆ ಎಂದು ನಿಕಟಪೂರ್ವ ಬಿಜೆಪಿ ಜಿಲ್ಲಾ ಅಧ್ಯಕ್ಷ ನ ವೀನಕುಮಾರ ಈ ಗುಳಗಣ್ಣವರ ಹೇಳಿದ್ದಾರೆ.