ಶೇಖರಪ್ಪರಿಗೆ ‘ಗ್ಲೋಬಲ್‌ ಅಚೀವರ್ಸ್‌ ಅವಾರ್ಡ್’

0

Get real time updates directly on you device, subscribe now.

ಕೊಪ್ಪಳ: ವಿಶ್ವವಾಣಿ ಪತ್ರಿಕೆಯಿಂದ ಕೊಡಮಾಡುವ ‘ಗ್ಲೋಬಲ್‌ ಅಚೀವರ್ಸ್‌ ಅವಾರ್ಡ್’ ಗೆ ಕೊಪ್ಪಳದ ಉದ್ಯಮಿ ಶೇಖರಪ್ಪ ಮುತ್ತೇನ್ನವರ್ ಆಯ್ಕೆ ಆಗಿದ್ದಾರೆ.

ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರತಿವರ್ಷ ವಿಶ್ವವಾಣಿ ‘ಗ್ಲೋಬಲ್‌ ಅಚೀವರ್ಸ್‌ ಅವಾರ್ಡ್’ ನೀಡುತ್ತದೆ. ಈ ಬಾರಿ ಕೊಪ್ಪಳದ ಉದ್ಯಮಿ ಶೇಖರಪ್ಪ ಮುತ್ತೇನ್ನವರ್ ಆಯ್ಕೆಯಾಗಿದ್ದಾರೆ. ಓಮನ್ ರಾಜಧಾನಿ ಮಸ್ಕತ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿದ ಶೇಖರಪ್ಪ ಸದ್ಯ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ತಾವರಗೇರ ಪಟ್ಟಣದ ಇವರು ಶೇಖರಪ್ಪ ಸದ್ಯ ಕೊಪ್ಪಳದಲ್ಲಿ ನೆಲೆಸಿದ್ದಾರೆ. ಸಹಕಾರಿ ಬ್ಯಾಂಕ್ ನಲ್ಲಿ ಪಿಗ್ಮಿ ಏಜೆಂಟ್ ಆಗಿ ತಮ್ಮ ವೃತ್ತಿ ಬದುಕು ಶುರು ಮಾಡಿ, ಇದೀಗ ಹತ್ತಾರು ಜನರಿಗೆ ಕೆಲಸ ಕೊಡುವಂತೆ ಬೆಳೆದು ನಿಂತಿದ್ದಾರೆ.

ಕೊಪ್ಪಳ ಜಿಲ್ಲಾ ಕೇಂದ್ರ ಸೇರಿ ಜಿಲ್ಲೆಯ ಬೇರೆ ಬೇರೆ ಕಡೆಗೆ ಜಮೀನು ಖರೀದಿ ಮಾಡಿ, ಲೇ ಔಟ್ ಮಾಡುತ್ತಿದ್ದಾರೆ. ಅತ್ಯಂತ ಯೋಗ್ಯ ದರದಲ್ಲಿ ನಿವೇಶನ ನೀಡುವ ಮೂಲಕ ಸ್ವಂತಃ ಮನೆ ಕಟ್ಟಿಕೊಳ್ಳುವ ಮಧ್ಯಮ ವರ್ಗದವರ ಕನಸು ನನಸು ಮಾಡುತ್ತಿದ್ದಾರೆ.

ಇದರ ಜೊತೆಗೆ ಶೇಖರಪ್ಪ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ನಿರಂತರವಾಗಿ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಜಿಲ್ಲಾ ಆಯುಕ್ತರಾಗಿ, ವಿವೇಕ ಜಾಗೃತಿ ಬಳಗ ತಂಡ, ಕೊಪ್ಪಳದ ಮಳೆ ಮಲ್ಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರ

Get real time updates directly on you device, subscribe now.

Leave A Reply

Your email address will not be published.

error: Content is protected !!