ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ
ಕೊಪ್ಪಳ ಜ ೨೪:ಜನವರಿ ೨೬ರಂದು ಬೆಂಗಳೂರಿನಲ್ಲಿ ಜರುಗಲಿರುವ ೭೬ನೇ ಗಣರಾಜ್ಯೊತ್ಸವದಕಾರ್ಯಕ್ರಮದಲ್ಲಿಎನ್.ಎಸ್.ಎಸ್ ವಿಭಾಗದಲ್ಲಿನ ಪಥಸಂಚಲನಕ್ಕೆ ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿ.ಎಸ್ಸಿ ೩ನೇ ಸೆಮಿಸ್ಟರ್‌ನ ವಿದ್ಯಾರ್ಥಿ ಕು. ಬಸವರಾಜ ಮತ್ತು ಬಿ.ಎ. ೩ನೇ ಸೆಮಿಸ್ಟರ್‌ನ ವಿದ್ಯಾರ್ಥಿ ಕು.ಹನುಮಂತ ಇವರು ಆಯ್ಕೆಯಾಗಿರುತ್ತಾರೆ. ಸದರಿ ವಿದ್ಯಾರ್ಥಿಗಳಿಗೆ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ.ಆರ್.ಮರೇಗೌಡ, ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ಚನ್ನಬಸವ ಮತ್ತುಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಶರಣಪ್ಪಚೌವ್ಹಾಣ ಮತ್ತುಡಾ.ಜಾಲಿಹಾಳ ಶರಣಪ್ಪ ಹಾಗೂ ಮಹಾವಿದ್ಯಾಲಯದಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Comments are closed.