ಸಂಸ್ಕಾರ ೨೦೨೫ – ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ

Get real time updates directly on you device, subscribe now.


ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳ ಸ್ನಾತಕೋತ್ತರ ವಿಭಾಗದಿಂದ ಸಂಸ್ಕಾರ – ೨೦೨೫ ಹೊಸ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರವೇಶ ಕಾರ್ಯಕ್ರಮವನ್ನು ದಿನಾಂಕ ೨೪-೦೧-೨೦೨೫ ರಂದು ಕಾಲೇಜಿನ ವಾಗ್ಭಟ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಡಾ. ಶಿವಕುಮಾರ. ಸೊಲಬಣ್ಣವರ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಡಾ. ಶ್ರವಣಕುಮಾರ. ಬಿ. ಕೆರೂರು, ಪ್ರಾಂಶುಪಾಲರು, ಬೀಳೂರು ಗುರುಬಸವ ಮಹಾಸ್ವಾಮೀಜಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಧೋಳ ಆಗಮಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಶಿವಕುಮಾರ ಸೊಲಬಣ್ಣವರ ಇವರು ಸ್ನಾತಕೋತ್ತರ ವಿಭಾಗವು ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಹೆಚ್ಚು ಮಾಡಿಕೊಳ್ಳುವಂತ ಪದವಿಗಳಾಗಿವೆ. ಎಲ್ಲರೂ ಈ ದೃಷ್ಟಿಕೋನದಿಂದ ತಮ್ಮ ಶಕ್ತಿಸಾಮರ್ಥ್ಯ ಮತ್ತು ಸಮಯವನ್ನು ನೀಡಬೇಕೆಂದು ತಿಳಿಸಿದರು. ಜನರಲ್ಲಿ ಆಯುರ್ವೇದ ವಿಜ್ಞಾನದ ಬಗ್ಗೆ ಜಾಗೃತಿ ಮೂಡುತ್ತಿದ್ದು ಸ್ನಾತಕೋತ್ತರ ವಿದ್ಯಾರ್ಥಿಗಳು ಆಯುರ್ವೇದ ಪದ್ಧತಿಯಲ್ಲಿಯೇ ವೈದ್ಯವೃತ್ತಿಯನ್ನ್ತು ಮುಂದುವರಿಸಬೇಕೆಂದರು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೊರ್ವ ಅತಿಥಿಗಳಾದ ಡಾ. ಶ್ರವಣಕುಮಾರ. ಬಿ. ಕೆರೂರು ಮಾತನಾಡಿ ಸ್ನಾತಕ ಪದವಿಯಲ್ಲಿ ಪಡೆದ ಜ್ಞಾನವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಆಧುನಿಕತೆಗೆ ಹೊಂದಿಕೊಂಡು ತಂತ್ರಜ್ಞಾನವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ. ಮಹಾಂತೇಶ ಸಾಲಿಮಠ ಮಾತನಾಡಿ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಮೂರು ವರ್ಷದ ಅವಧಿಯಲ್ಲಿ ತಮ್ಮ ವಿಭಾಗದ ವೈಶಿಷ್ಟತೆಯನ್ನು ಕರಗತಗೊಳಿಸಿಕೊಂಡು ವೈದ್ಯವೃತ್ತಿಯಲ್ಲಿ ಬೆಳೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಸುರೇಶ ಹಕ್ಕಂಡಿ ಕಾಲೇಜಿನ ಪರಿಚಯವನ್ನು ನೀಡಿದರು. ಡಾ. ಪ್ರಭು. ಸಿ. ನಾಗಲಾಪೂರ ಸ್ವಾಗತ ಮಾಡಿದರು. ಡಾ. ನೇಹಾ ಕಾರ್ಯಕ್ರಮ ನಿರೂಪಿಸಿದರು. ಡಾ. ವೀರಯ್ಯ ಹಿರೇಮಠ, ಡಾ. ಸೋಮನಾಥ ಹಾಗೂ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!