ಒಂದು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆದು ಬದುಕು ಕಟ್ಟಿಕೊಂಡು ಸಾಧನೆ ಮಾಡಿದ ಪ್ರಗತಿಪರ ರೈತ ಅಮರಪ್ಪ ಕಂಚಿಯ ಯಶೋಗಾಥೆ

Get real time updates directly on you device, subscribe now.

ಬಸವರಾಜ ಪಲ್ಲೇದ
ಕುಷ್ಟಗಿ.ಅ.07: ರೇಷ್ಮೆ ಕೃಷಿ ಇಂದು ನೀರು ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಕುಷ್ಟಗಿ ಪಟ್ಟಣದ ಪ್ರಗತಿಪರ ರೈತ ಅಮರಪ್ಪ ಬಸಪ್ಪ ಕಂಚಿ ಒಂದು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ (ರೇಷ್ಮೆ ) ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಇತ್ತೀಚಿಗೆ ಬಯಲು ಸೀಮೆಯಲ್ಲಿ ತೀವ್ರ ಮಳೆ ಕೊರತೆಯಿಂದ ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರಿನ ಅಭಾವವಾಗಿ ಎಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಕುಷ್ಟಗಿ ಪಟ್ಟಣದ ಹಳೇ ನೆರೆಬೆಂಚಿ ರಸ್ತೆಯ ಪಕ್ಕದ ಜಮೀನಿನಲ್ಲಿ ಪ್ರಗತಿಪರ ರೈತ ಅಮರಪ್ಪ ಕಂಚಿ ಕೊಳವೆಬಾವಿ ನೀರಿನಿಂದ ಹಿಪ್ಪುನೇರಳೆ (ರೇಷ್ಮೆ) ಬೆಳೆದು ಆರ್ಥಿಕವಾಗಿ ಸಬಲರಾಗಿದ್ದಾರೆ.

ಅಮರಪ್ಪ ಕಂಚಿವರು ಈ ಮೊದಲು ತೊಗರಿ, ಸಜ್ಜೆ, ಎಳ್ಳು, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದು ಕೈಸುಟ್ಟಕೊಂಡು.
ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಬಸವರಾಜ ಹಂಡಿ, ರೇಷ್ಮೆ ನಿರೀಕ್ಷಕ ಮಹಾಂತೇಶ ಮುಚಖಂಡಿ, ಪ್ರಭಾರಿ ವಿಸ್ತರಣಾಧಿಕಾರಿ ನಿಂಗಪ್ಪ ಮುಕ್ಕಣ್ಣನವರ, ಬಿ ಸಿ ಕಮತರ, ಮಲ್ಲನಗೌಡ ಹಿರೇಗೌಡ್ರು, ಹನಮಗೌಡ ನೆರೆಬೆಂಚಿ ಇವರುಗಳ ಸಲಹೆ ಪಡೆದುಕೊಂಡು ಕಳೆದ 10-12 ವರ್ಷದಿಂದ ಹಿಪ್ಪು ನೇರಳೆ ಬೆಳೆದು ರೇಷ್ಮೆ ಹುಳು ಸಾಕಣಿಕೆ ಕೃಷಿ ಮಾಡುವ ಮೂಲಕ ಲಕ್ಷಾಂತರ ರೂ ಆದಾಯಗಳಿಸಿದ್ದಾರೆ.

ನಾಟಿ ಪದ್ದತಿ : ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಐದು ಅಡಿ ಅಂತರವಿದ್ದು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಮೂರು ಅಡಿ ಅಂತರವಿದೆ. ಮೂರು ತಿಂಗಳಿಗೊಮ್ಮೆ ರೇಷ್ಮೆ ಹುಳು ಸಾಕಣಿಕೆ ಮಾಡಲಾಗುತ್ತದೆ. ರೇಷ್ಮೆ ಹುಳುಗಳು ಗೂಡು ಕಟ್ಟವವರೊಗೂ ಪ್ರತಿ ನಿತ್ಯ ಬೆಳಗಿನ ಸಮಯ ಈ ಹಿಪ್ಪು ನೇರಳೆ ಸೊಪ್ಪುನ್ನು ಕಟಾವು ಮಾಡಿ ರೇಷ್ಮೆ ಹುಳುಗಳಿಗೆ ಹಾಕಲಾಗುತ್ತದೆ.

ರೇಷ್ಮೆ ಚಾಕಿ : ತಾಲೂಕಿನ ಬಿಳೇಕಲ್, ಕೆ. ಬೋದೂರು ಸೇರಿದಂತೆ ಯಲಬುರ್ಗಾ, ಶಿರಹಟ್ಟಿ, ಮಂಡ್ಯ, ರಾಮನಗರ, ಧಾರವಾಡ ಜಿಲ್ಲೆಯ ಹಿರೇಮಲ್ಲಿಗೆವಾಡ, ಗೋಕಾಕ ತಾಲೂಕಿನ ಖಾನಟ್ಟಿ ಗ್ರಾಮದ ಚಾಕಿ ಕೇಂದ್ರಗಳಿಂದ ಚಾಕಿ ( ರೇಷ್ಮೆ ಹುಳು) ಖರೀದಿಸಿ ತಂದು 25-30 ದಿನಗಳ ಕಾಲ ಸಾಕಣಿಕೆ ಮಾಡಿ ಮಾರಾಟ ಮಾಡಲಾಗುತ್ತದೆ. ತಲಾ ಒಂದು ಟ್ರೈಯ್ ಯಲ್ಲಿ 10 ಮೊಟ್ಟೆ ಗಳು ಇರುತ್ತವೆ. ಅವುಗಳ ಬೆಲೆ 350-400 ರೂ ಗಳಂತೆ 10 ಟ್ರೈಯ್ ಯಲ್ಲಿ 100 ರೇಷ್ಮೆ ಹುಳುಗಳನ್ನು ಖರೀದಿಸಿ ಸಾಕಣಿಕೆ ಮಾಡಲಾಗುತ್ತದೆ ಎಂದು ರೈತ ಅಮರಪ್ಪ ಕಂಚಿ ತಿಳಿಸಿದರು.

ಮಾರಾಟ : ಇಲಕಲ್, ಶಿರಹಟ್ಟಿ, ವಿಜಯಪುರ ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಿರುವದರಿಂದ ಸುಪ್ರಸಿದ್ಧ ರೇಷ್ಮೆ ಮಾರುಕಟ್ಟೆ ಎಂದು ಪ್ರಸಿದ್ಧಿ ಪಡೆದ ರಾಮನಗರ ರೇಷ್ಮೆ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಲಾಗುತ್ತದೆ.
ಬೆಂಬಲ ಬೆಲೆ : 2021-22 ಸಾಲಿನಲ್ಲಿ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ರೇಷ್ಮೆ ಗೂಡುಗೆ 800-900 ರೂ ಗೆ ಮಾರಾಟ ಮಾಡಲಾಗುತ್ತಿತ್ತು ಆದರೇ ಪ್ರಸ್ತಕ ಸಾಲಿನಲ್ಲಿ ಒಂದು ಕೆ.ಜಿ ರೇಷ್ಮೆ ಗೂಡುಗೆ 400-450 ರೂ ಗೆ ಮಾರಾಟ ಮಾಡಲಾವಾಗಿದೆ. ಬಾರಿ ಪ್ರಮಾಣದ ಬೆಲೆ ಕುಸಿತದಿಂದ ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬೆಸರ ವ್ಯಕ್ತ ಪಡಿಸಿದರು.

ಕೋಟ್…….
ಮಾನ್ಸೂನ್ ಹವಮಾನ ವೈಪರೀತ್ಯ ದಿಂದ ರೇಷ್ಮೆ ಹುಳುಗಳು ಖರೀದಿ ಬೆಲೆ ವ್ಯತ್ಯಾಸ ವಾಗಿದೆ ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಾಗಾವು ಸಾದ್ಯತೆ ಇದೆ ರೈತರು ಇನ್ನೂ ಹೆಚ್ಚಿನ ರೀತಿಯಲ್ಲಿ ರೇಷ್ಮೆ ಬೆಳೆ ಬೆಳೆದು ಆರ್ಥಿಕವಾಗಿ ಸದೃಢವಾಗಬೇಕು ಎಂದು ರೈತರಿಗೆ ಸಲಹೆ ನೀಡಿದ್ದಾರೆ.
ಕುಷ್ಟಗಿ ಪ್ರಭಾರಿ ರೇಷ್ಮೆ ವಿಸ್ತರಣಾಧಿಕಾರಿ ನಿಂಗಪ್ಪ ಮುಕ್ಕಣ್ಣನವರ.

Get real time updates directly on you device, subscribe now.

Comments are closed.

error: Content is protected !!