ಜಪ್ತಿಪಡಿಸಿದ 62 ಕೆ.ಜಿ. ಗಾಂಜಾ ಸುಟ್ಟು ವಿಲೇವಾರಿ
Koppal ಕೊಪ್ಪಳ ಜಿಲ್ಲೆಯಲ್ಲಿ 2000, 2008, 2009, 2012 & 2023 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮೀತಿಯ ಅಧ್ಯಕ್ಷರಾದ ಡಾ| ರಾಮ್. ಎಲ್. ಅರಸಿದ್ದಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು ಕೊಪ್ಪಳ, ಹಾಗೂ ಸದಸ್ಯರಾದ ಮುತ್ತಣ್ಣ, ಸರವಗೋಳ ಡಿ.ಎಸ್.ಪಿ. ಕೊಪ್ಪಳ ಉಪವಿಭಾಗ ಹಾಗೂ ಯಶವಂತ್ ಕುಮಾರ, ಎಸ್.ಬಿ. ಡಿ.ಎಸ್.ಪಿ, ಸಿ.ಇ.ಎನ್ ಪೊಲೀಸ್ ಠಾಣೆ, ವಾಯ್.ಎಸ್.ಹರಿಶಂಕರ ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಜೈವಿಕ ವೈದ್ಯಕೀಯ ವಿಲೇವಾರಿ ಘಟಕದ ಮುಖ್ಯಸ್ಥರಾದ ಚಂದ್ರು ಗಡಾದ ರವರ ಸಮಕ್ಷಮದಲ್ಲಿ 6 ಪ್ರಕರಣಗಳಲ್ಲಿ ಜಪ್ತಿಪಡಿಸಿದ 62 ಕೆ.ಜಿ. 479 ಗ್ರಾಂ. ಗಾಂಜಾವನ್ನು ಶರಣ ಅಸೋಸಿಯೇಟ್ಸ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕ ನಾಗೇಶನಹಳ್ಳಿಯ ಬಾಯರ್‌ನಲ್ಲಿ ಹಾಕಿ ಪರಿಸರ ಮಾಲಿನ್ಯವಾಗದಂತೆ ಸುಟ್ಟು ವಿಲೇವಾರಿ ಮಾಡಲಾಯಿತು.
Comments are closed.