ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ

Get real time updates directly on you device, subscribe now.

ಕೊಪ್ಪಳ ವಿಶ್ವವಿದ್ಯಾಲಯದ ಬಿ.ಇಡಿ. ಎರಡನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿರುತ್ತಾರೆ. ಮಹಾವಿದ್ಯಾಲಯದ ಫಲಿತಾಂಶ 100 ಪ್ರತಿಶತ ಆಗಿದ್ದು 600 ಅಂಕಗಳಿಗೆ 556 ಅಂಕಗಳನ್ನ ಗಳಿಸಿ ಕುಮಾರಿ ಆಯಿಷ ಪ್ರಥಮ, 549 ಅಂಕಗಳನ್ನು ಪಡೆದು ಕುಮಾರಿ ಮಂಜುಳಾ ಹಾಗೂ ಕುಮಾರ್ ಸಂಗಮೇಶ್ವರ ಸ್ವಾಮಿ ದ್ವಿತೀಯ ಹಾಗೂ 547 ಅಂಕಗಳನ್ನು ಪಡೆದು ಶ್ರೀಮತಿ ರಮ್ಯಾ ಹಾಗೂ ಕುಮಾರಿ ಸಂಜನಾ ಪತ್ತಾರ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಒಟ್ಟು 10 ವಿದ್ಯಾರ್ಥಿಗಳು 90 ಪ್ರತಿಶತಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಗವಿಮಠದ ಶ್ರೀಗಳು, ಟ್ರಸ್ಟಿನ ಆಡಳಿತ ಮಂಡಳಿ, ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!