ಜನವರಿ-೨೫ ರಿಂದ ೩೧ ರವರೆಗೆ ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ

Get real time updates directly on you device, subscribe now.

ಗಂಗಾವತಿ: ಕಿಷ್ಕಿಂಧಾ ಪ್ರತಿಷ್ಠಾನ ಗಂಗಾವತಿ, ವಿಪ್ರಸಿರಿ ಸೌಹಾರ್ದ ಸಹಕಾರ ಸಂಘ ನಿಯಮಿತ ಗಂಗಾವತಿ ಇವರಿಂದ ಜನವರಿ-೨೫ ರಿಂದ ೩೧ ರವರೆಗೆ ಸಂಜೆ ೬ ರಿಂದ ೮ ರವರೆಗೆ ನಗರದ ಕೋರ್ಟ್ ಮುಂಭಾಗದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ ನಡೆಯಲಿದೆ ಎಂದು ಸಂಚಾಲಕರಾದ ಪವನಕುಮಾರ ಗುಂಡೂರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್   ಕೃಷ್ಣಾನಂದ ಶರಣರು ಮಾಡಲಿದ್ದು, ಪ್ರವಚನವನ್ನು ಖ್ಯಾತ ವಿದ್ವಾಂಸರಾದ ವಿದ್ವಾನ್   ಜಗದೀಶ ಶರ್ಮಾ ಸಂಪ ಬೆಂಗಳೂರು ಇವರು ನೀಡಲಿದ್ದಾರೆ.
ಜನವರಿ-೨೫ ಶನಿವಾರ ರಾಮಾಯಣ ಅವತಾರ, ಜನವರಿ-೨೬ ರವಿವಾರ ಶಬರಿ-ಮಾತಂಗ ಪರ್ವತ, ಜನವರಿ-೨೭ ಸೋಮವಾರ ಶ್ರೀರಾಮ-ಪಂಪಾಸರೋವರ, ಜನವರಿ-೨೮ ಮಂಗಳವಾರ ಆಂಜನೇಯ-ಅಂಜನಾದ್ರಿ, ಜನವರಿ-೨೯ ಬುಧವಾರ ಸುಗ್ರೀವ-ಋಷ್ಯಮೂಕ, ಜನವರಿ-೩೦ ಗುರುವಾರ ವಾಲಿ-ತಾರಾ ಪರ್ವತ ಕುರಿತಂತೆ ಪ್ರವಚನ ನಡೆಯಲಿದೆ. ಪ್ರವಚನದ ಸಮಾರೋಪ ಸಮಾರಂಭವು ಜನವರಿ-೩೧ ಶನಿವಾರ ಸಂಜೆ ೬:೦೦ ಗಂಟೆಗೆ ರಾಮಾಯಣದ ಸಂದೇಶದೊಂದಿಗೆ ನಡೆಯಲಿದೆ ಎಂದು ತಿಳಿಸಿದರು.
ಮತ್ತೊರ್ವ ಸಂಚಾಲಕರಾದ ನಾಗರಾಜ ಗುತ್ತೇದಾರ ಮಾತನಾಡಿ, ಸನಾತನ ಸಂಸ್ಕೃತಿಯನ್ನು, ಮೌಲ್ಯಗಳನ್ನು, ಆದರ್ಶನಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಿಷ್ಕಿಂಧಾ ಕಾಂಡ ವಿಶೇಷವಾಗಿ ನಮ್ಮ ನೆಲದ ಬಗ್ಗೆ ಮಾಹಿತಿ ನೀಡುತ್ತದೆ.  ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಈ ರೀತಿಯ ಪ್ರವಚನ ಕಾರ್ಯಕ್ರಮಗಳಿಗೆ ಭಾಗವಹಿಸುವುದರಿಂದ ಭತ್ತದ ಕಣಜವು ಜ್ಞಾನದ ಕಣಜ, ಆಧ್ಯಾತ್ಮಿಕ ಕಣಜ ಆಗುವುದರಲ್ಲಿ ಸಂದೇಹವಿಲ್ಲ. ಕಾರಣ ಗಂಗಾವತಿಯ ಸರ್ವ ಸಮಾಜದ ನಾಗರಿಕರು ಪ್ರವಚನದ ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಕಾರ್ಯದಲ್ಲಿ ನಿರತರಾಗಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಇತರ ಸಂಚಾಲಕರಾದ ಜೋಗದ ನಾರಾಯಣಪ್ಪ ನಾಯಕ, ಸುಬ್ರಹ್ಮಣ್ಯ ರಾಯಕರ್, ಅಕ್ಕಿ ಚಂದ್ರಶೇಖರ, ಅರ್ಜುನ ಕೆ.ವೈ.ಟಿ.ಸಿ., ಬದರಿ ನಾರಾಯಣ ಜೋಶಿ, ಅನೀಲ್ ದೇಸಾಯಿ, ಗುರುರಾಜ ಚಿರ್ಚನಗುಡ್ಡ, ಜಗನ್ನಾಥ ಆಲಂಪಲ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!