ಗಂಗಾವತಿಯ ಕ್ರಾಂತಿಚಕ್ರ ಬಳಗದಿಂದ ನಡೆದ ಕಾಮ್ರೆಡ್ ಗದ್ದರ್‌ರವರ ನುಡಿನಮನ

Get real time updates directly on you device, subscribe now.

ಗಂಗಾವತಿ: ಈ ಸಂಜೆ ಸಭೆ ಸೇರಿದ ಸಮಾನ ಮನಸ್ಕ ಗೆಳೆಯರ ಬಳಗ ಕಾಮ್ರೆಡ್ ಭಾರದ್ವಾಜ್‌ರವರ ನೇತೃತ್ವದಲ್ಲಿ ಕಾಮ್ರೇಡ್ ಗುಮ್ಮಡಿ ವಿಠ್ಠಲರಾವ್ ಗದ್ದರ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಡಾ. ಲಿಂಗಣ್ಣ ಜಂಗಮರಳ್ಳಿ ಅವರು ಮಾತಾಡುತ್ತಾ, ಕಾಮ್ರೆಡ್ ಗದ್ದರ್‌ರವರು ಭಾರತದ ಸಾಂಸ್ಕೃತಿಕ ಲೋಕದ ಬಹುದೊಡ್ಡ ದೃವತಾರೆಯಾಗಿ ನಮ್ಮೊಂದಿಗೆ ಇದ್ದರು. ಅವರಿಲ್ಲ ಎನ್ನುವ ಆಘಾತ ನಮ್ಮನ್ನು ಕಾಡುತ್ತಿದೆ. ಚಳುವಳಿಗೆ ಪ್ರೇರಣೆಯಾಗಿ, ದುಡಿಯುವವರ ಶಕ್ತಿಯಾಗಿ ಹೋರಾಟಕ್ಕೆ, ಹಾಡುಗಳಿಗೆ ಸ್ಪೂರ್ತಿಯಾಗಿ ಸಾವಿರಾರು ಜನ ಬರಹಗಾರರಿಗೆ ಪ್ರೇರಣೆಯಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕವಿ ರಮೇಶ್ ಗಬ್ಬೂರ್, ಡಾ. ಸೋಮಕ್ಕ, ಬಸಪ್ಪ ನಾಗೋಲಿ, ಸಣ್ಣ ಹನುಮಂತಪ್ಪ, ಕೃ? ಬುಡ್ಗಜಂಗಮ ಇನ್ನಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!