ಪ್ರತಿಯೊಬ್ಬರು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು : ರಾಜಶೇಖರಗೌಡ ಆಡೂರ ಕರೆ
ಕೊಪ್ಪಳ : ಪ್ರತಿಯೊಬ್ಬರು ದೇಹದ ಆರೋಗ್ಯದ ರಕ್ಷಣೆ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶ್ರೀಗವಿಸಿದ್ದೇಶ್ವರ ಆರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ರಾಜಶೇಖರಗೌಡ ಎಂ.ಆಡೂರ ಹೇಳಿದರು.
ಅವರು ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಗವಿಸಿದ್ದೇಶ್ವರ ಆರ್ಬನ್ ಕೋ-ಆಪ್ ಬ್ಯಾಂಕ್ ಹಾಗೂ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿಜರುಗಿದ ಉಚಿತ ನೇತ್ರಾ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರು ಇಂತಹ ಉಚಿತ ನೇತ್ರಾ ತಪಾಸಣಾ ಶಿಬಿರಗಳನ್ನು ಸದುಪಯೋಗಪಡಿಕೊಂಡು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ನೇತ್ರ ವೈದ್ಯರಾದ ಕು. ಶೃತಿ ಗಂಗಾ, ಕೊಪ್ಪಳ ಶಾಖೆಯ ಮುಖ್ಯಸ್ಥರಾದ ದೀಪಾ ಎಲ್.ಡಿ. ಮಾರ್ಕೆಟಿಂಗ್ ಮ್ಯಾನೇಜರ್‌ರಾದ ಬಸಯ್ಯ ಹಿರೇಮಠ ಅವರನ್ನು ಬ್ಯಾಂಕಿನಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಉಚಿತ ನೇತ್ರಾ ತಪಾಸಣಾ ಶಿಬಿರದಲ್ಲಿ ಒಟ್ಟು ೨೪೪ ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ನಿರ್ದೆಶಕರಾದ ಬಸವರಾಜ ಶಹಪೂರ, ವಿಶ್ವನಾಥ ಅಗಡಿ, ಗವಿಸಿದ್ದಪ್ಪ ತಳಕಲ್,ಶಿವರಡ್ಡಿ ಭೂಮಕ್ಕನವರ, ರಾಜೇಂದ್ರಕುಮಾರ ಶೆಟ್ಟರ್,ಶಿವಕುಮಾರ ಪಾವಲಿಶೆಟ್ಟರ್, ರಮೇಶ ಕವಲೂರ, ನಾಗರಾಜ ಅರಕೇರಿ,ಸುಮಂಗಲಾ ಸೋಮಲಾಪುರ, ಸೈಯದ್ ಷಹಾನಾಜಬೇಗಂ, ಜಯಶ್ರೀ ಬಬ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಶಿ ಇವರು ಪ್ರಾಸ್ತಾವಿಕ ಮಾತನಾಡಿದರು ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ನೆಕೊಪ್ಪ ಕಾರ್ಯಕ್ರಮ ನಿರೂಪಿಸಿದರು ಹಾಗೂ ಬ್ಯಾಂಕಿನ ಲೆಕ್ಕಿಗರಾದ ವೀರಮ್ಮ ನರಗುಂದ ಇವರು ನೇತ್ರದಾನ ಮಾಡುವ ವಾಗ್ದಾನಾ ಪತ್ರ ನೀಡಿದರು.
Comments are closed.