ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ: ಹನುಮೇಶ್ ಕುರುಬರು
ಗಂಗಾವತಿ: ಪ್ರಾಪಂಚಿಕ ಡಂಬಾರಚಾರಗಳನ್ನು ಕಟುವಾಗಿ ಖಂಡಿಸುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ ಎಂದು ನಗರ ಘಟಕ ಅಧ್ಯಕ್ಷ ಹನುಮೇಶ್ ಕುರುಬರು ಹೇಳಿದರು.
ಅವರು ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದಲ್ಲಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ಸಾಮಾನ್ಯ ಜನರಲ್ಲಿದ್ದ ಮೇಲು ಕೀಳು ಮುಂತಾದ ವಿಷಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಶರಣ, ಜಗತ್ತಿನ ಅಂಕುಡೊಂಕು ತಮ್ಮದೇ ಆದ ಕಟು ಶಬ್ದಗಳು, ಟೀಕಾ ವಚನಗಳ ಮೂಲಕ ತಿದ್ದುತ್ತಿದ್ದರು. ಬಸವಣ್ಣ ನ ಕಾಲದ ಶರಣರಲ್ಲೇ ಅತಿ ನಿಷ್ಟೂರ ಮತ್ತು ನೇರ ನೆಡೆನುಡಿಯ ಉಗ್ರ ಶರಣ ಎನ್ನಬಹುದು ಎಂದರು.
೧೨ ನೇ ಶತಮಾನದಲ್ಲಿದ್ದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿಲ್ಲ, ಈಗಿನ ಸಮಾಜಕ್ಕೆ ದಾರಿ ತೋರಿಸಲು ಮತ್ತೆ ನಿಜ ಶರಣರಂಥ ಶರಣರ ಅಗತ್ಯವಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಸುನಿಲ್ ಕುಲಕರ್ಣಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಗಡ್ಡಿ, ಕುಷ್ಟಗಿ ನಗರ ಘಟಕ ಉಪಾಧ್ಯಕ್ಷ ಮುತ್ತುರಾಜ್. ಗೌರವಾಧ್ಯಕ್ಷ ಹುಲಿಯಪ್ಪ ಅರೇಗಾರ್, ಯುವ ಘಟಕ ಉಪಾಧ್ಯಕ್ಷರು ಮಾರುತಿ, ಉಪಾಧ್ಯಕ್ಷರು ಕೊಟ್ರೇಶ್ ಕುಂಬಾರ್, ಆಟೋ ಚಾಲಕರು ಅಧ್ಯಕ್ಷರು ಎಲ್ಲಪ್ಪ. ತಾಲೂಕ ಆಟೋ ಚಾಲಕರ ಉಪಾಧ್ಯಕ್ಷ ಹಾಗು ತಾಲೂಕ ಆಟೋ ಚಾಲಕರ ಕಾರ್ಯದರ್ಶಿ ಗಿಡ್ಡಪ್ಪ ಪರಸುರಾಮ್ ಇತರರಿದ್ದರು.