ಸಿಹಿ ಮಾರಾಟದ ಜೊತೆಗೆ ಸಾಮಾಜಿಕ ಅರಿವನ್ನು ಮೂಡಿಸುವ ಬ್ಯಾನರ
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮೂರನೆ ದಿನವಾದ ಇಂದು ಮಹಿಳೆಯರು ಸಡಗರ ಸಂಭ್ರಮದಿಂದ ಜಾತ್ರೆಯಲ್ಲಿ ಬಳೆಗಳನ್ನು, ಮಕ್ಕಳ ಆಟಿಕೆ, ಗೃಹ ಉಪಯೋಗಿ ವಸ್ತುಗಳನ್ನು ಖರಿದಿಸುವಲ್ಲಿ ನಿರತರಾಗಿದ್ದರು. ಜಾತ್ರೆಯಲ್ಲಿ ಹಾಕಿದ ಸಿಹಿ ಮಾರಾಟ ಮಾಡು ಅಂಗಡಿಗಳಲ್ಲಿ ಸಿಹಿ ಮಾರಾಟದ ಜೊತೆಗೆ ಮೂಡಿಸುವ ಶುಭಾಷಿತಗಳ ಮೂಲಕ ಸಾಮಾಜಿಕ ಅರಿವನ್ನು ಮೂಡಿಸು ಬ್ಯಾನರಗಳ್ಳಿ ನಮ್ಮ ಸಂವಿಧಾನ ನಮ್ಮ ಅಭಿಮಾನ, ಭಾರತೀಯ ಧರ್ಮದ ಪವಿತ್ರ ಗ್ರಂಥ ಸಂವಿಧಾನಕ್ಕಾಗಿ ನಾವು, ನಮಗಾಗಿ ಸಂವಿಧಾನ. ಸರ್ಕಾರದ ಉಚಿತ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಭದ್ರತೆ.
ಮೊಬೈಲ್ ಮಕ್ಕಳ ಮೆದುಳಿಗೆ ಮಾರಿ, ಪುಸ್ತಕ ಉತ್ತಮ ಬಾಳಿಗೆ ದಾರಿ, ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆ ನೀಡಿ. ವಿಕಲಚೇತನರ ನಡೆ ಸಕಲಚೇತನದಡೆ, ಭಾರತದ ನಡೆ ವಿಶ್ವಚೇತನ ದಡೆ ರಾರಾಜಿಸುತ್ತಿರುವುದು ವಿಶೇಷ.