ಬಳಗಾನೂರ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ
ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರಕಾರ್ಯಕ್ರಮವೂಒಂದು ವಿಶಿಷ್ಟವಾದುದು. ಇದುಕೂಡಾ ಶ್ರೀಗವಿಮಠದ ಪರಂಪರಾಗತ ಸಂಪ್ರದಾಯ. ಬಳಗಾನೂರಿನ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಶ್ರೀಮಠದ ಮಹಾದ್ವಾರದಿಂದ ಪ್ರಾರಂಭಿಸಿ ಶ್ರೀ ಗವಿಮಠದ ಬೆಟ್ಟದ ಮೇಲಿನ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯವರಗೆ ಹೂವಿನ ಹಾಸಿಗೆಯ ಮೇಲೆ ಭಕ್ತಿಯ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕಿದರು.
ಶರಣರ ಹಿಂದೆಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡಅಪಾರ ಭಕ್ತ ಸಮೂಹವೇ ದೀರ್ಘದಂಡ ನಮಸ್ಕಾರ ಹಾಕುತ್ತದೆ.ಚಿಕ್ಕೇನಕೊಪ್ಪದ ಲಿಂ. ಶ್ರೀ ಚನ್ನವೀರ ಶರಣರುತಮ್ಮ ಗುರುಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆ ಪಡೆದ ನಂತರ ಅಂದಿನಿಂದ ನಿರಂತರವಾಗಿ ಸುಮಾರು ೫೦ ವರ್ಷಗಳಿಂದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯತನಕ ದೀರ್ಘದಂಡ ನಮಸ್ಕಾರ ಹಾಕುವುದರ ಮೂಲಕ ಗುರುಗಳಿಗೆ ಭಕ್ತಿಯ ನಮನಗಳನ್ನು ಅರ್ಪಿಸುತ್ತಿದ್ದರು.ಅವರ ಲಿಂಗೈಕ್ಯದ ನಂತರ ಇದೀಗ ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರುತಮ್ಮಗುರು ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಈ ಕಾರ್ಯಕ್ರಮವನ್ನು ನೋಡಲುಜಾತ್ರೆಯಷ್ಟೇಜನರು ಆಗಮಿಸಿ ಶರಣರ ದರ್ಶನಾಶಿರ್ವಾದ ಪಡೆಯುತ್ತಾರೆ. ಹೊಂಬಳ, ಚಿಕ್ಕೇನಕೊಪ್ಪ, ಸೂಡಿಗ್ರಾಮದ ಸದ್ಭಕ್ತರ ಭಜನಾ ಮಂಡಳಿಯವರ ಭಕ್ತಿಗೀತೆಗಳು, ಜಯಘೋಷಗಳು, ಭಕ್ತಿಭಾವದ ಘೋಷಣೆಗಳು, ಭಕ್ತರೆಲ್ಲರಎದೆಯಲ್ಲಿ ’ಗವಿಸಿದ್ಧ, ಗವಿಸಿದ್ಧ’ ಎಂಬ ವಾಣಿ ಪ್ರತಿಧ್ವನಿಸಿರುತ್ತಿತ್ತು.