ಶ್ರೀ ಗವಿಸಿದ್ಧೇಶ್ವರ ಭಕ್ತಿಗೀತೆ ಬಿಡುಗಡೆ

0

Get real time updates directly on you device, subscribe now.


ಕೊಪ್ಪಳ- ಉತ್ತಮ ಕೃಷಿ ಪ್ರಶಸ್ತಿ ವಿಜೇತ ಹಾಗೂ ಸಮಾಜಸೇವಕರಾದಕೊಪ್ಪಳ ತಾಲೂಕಿನಇರಕಲ್ಲಗಡದಗ್ರಾಮದವೀರಬಸಪ್ಪ ಪಟ್ಟಣಶೆಟ್ಟಿಇವರಿಂದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ರಚಿಸಿದ ಭಕ್ತಿಗೀತೆಯನ್ನುಇಂದುಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಮೂಲತಹಕೃಷಿಕರಾದಇವರುತಮ್ಮ೮೩ನೇ ವಯಸ್ಸಿನಲ್ಲಿ ತಾವೇ ಸ್ವತಃ ಸಾಹಿತ್ಯವನ್ನು ರಚಿಸಿ ಹಾಗೂ ಹಾಡುವುದರ ಮೂಲಕವಾಗಿ ಗವಿಸಿದ್ದೇಶ್ವರನಿಗೆ ತಮ್ಮ ಸಾಹಿತ್ಯದ ನುಡಿಸೇವೆಯನ್ನು ಸಲ್ಲಿಸಿದ್ದಾರೆ. ಈ ಭಕ್ತಿಗೀತೆಯನ್ನುಗಾಯಕರಾದ ಬಾಷು ಕಿನ್ನಾಳ ಅವರು ಸಂಗೀತ ಸಂಯೋಜನೆಯೊಂದಿಗೆಧ್ವನಿ ಸೇವೆಗೈಯುದಿರುತ್ತಾರೆ. ವಿರೇಶಕುಮಾರ ಬೇಟಗೇರಿ ಸಂಕಲಿಸಿರುತ್ತಾರೆ. ಈ ಸಂದರ್ಭದಲ್ಲಿಅವರಕುಟುಂಬ ವರ್ಗದವರು ಹಾಜರಿದ್ದರು. ಸಾಹಿತ್ಯರಚನೆಕಾರರಾದಅವರಿಗೆ ಪೂಜ್ಯಶ್ರೀಗಳು ಆಶೀರ್ವದಿಸಿದರು.

ಗವಿಸಿದ್ಧ, ಗವಿಸಿದ್ಧ, ಅನ್ನಿರಿ
ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.

ತಂದೆತಾಯಿ ಬಂಧು ಬಳಗವೆಲ್ಲ ನೀನೆ ಅನ್ನಿರಿ
ನಿನ್ನ ಹೊರತು ಬೇರೆಯಾರುಇಲ್ಲವೆಂದು ಹೇಳಿರಿ
ಗವಿಸಿದ್ಧ, ಗವಿಸಿದ್ಧ, ಅನ್ನಿರಿ
ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.

ಕ? ಬರಲಿ ಸುಖವೇ ಬರಲಿ ಸ್ವಾಮಿ ನಿನ್ನದೆನ್ನಿರಿ
ನಿನ್ನಕರುಣೆಎಂದೆ ನಮಗೆ ಸಾಕು ಹೇಳಿ
ಗವಿಸಿದ್ಧ, ಗವಿಸಿದ್ಧ, ಅನ್ನಿರಿ
ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.

ಕಲ್ಲೇಇರಲಿ ಮುಳ್ಳೇ ಬರಲಿ ಎಲ್ಲಾ ನಿನ್ನದೆನ್ನಿರಿ
ನಿನ್ನ ಶ್ರೀರಕ್ಷೆಯೊಂದೇ ಯಮಗೆ ಸಾಕು ಎನ್ನಿರಿ
ಗವಿಸಿದ್ಧ, ಗವಿಸಿದ್ಧ, ಅನ್ನಿರಿ
ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.

ಕಲ್ಲೇಇರಲಿ ಮುಳ್ಳೇ ಇರಲಿ ಎಲ್ಲ ನಿನ್ನದೆನ್ನಿರಿ.
ನಿನ್ನ ಶ್ರೀರಕ್ಷೆಯೊಂದೇ ಯಮಗೆ ಸಾಕು ಎನ್ನಿರಿ
ಗವಿಸಿದ್ಧ, ಗವಿಸಿದ್ಧ, ಅನ್ನಿರಿ
ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.

ಎಲ್ಲೇಇರಲಿ ಹೇಗೆ ಇರಲಿ ಸ್ವಾಮಿ ಸ್ಮರಣೆ ಮಾಡಿರಿ
ಸದಾ ಸ್ಮರಣೆ ಮಾಡಿ ಅವನ ಕೃಪೆಗೆ ಪಾತ್ರರಾಗಿರಿ
ಗವಿಸಿದ್ಧ, ಗವಿಸಿದ್ಧ, ಅನ್ನಿರಿ
ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.

ಲೇಖಕರು-ವೀರಬಸಪ್ಪ ಪಟ್ಟಣಶೆಟ್ಟಿಇರಕಲ್ಲಗಡ
೯೪೮೦೪೮೮೧೨೭,೯೪೪೮೬೩೪೦೨೫

Get real time updates directly on you device, subscribe now.

Leave A Reply

Your email address will not be published.

error: Content is protected !!