ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ
ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ. ಶ್ರೀ ಗವಿಮಠ ಆವರಣದಲ್ಲಿನ ಕೆರೆಯಲ್ಲಿ ಜರುಗಿತು
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಮಠದಿಂದ ಜರಗುವ ಸಾಂಪ್ರಾದಾಯಿಕ ಕಾರ್ಯಕ್ರಮಗಳಲ್ಲಿ ಒಂದಾದ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮವು ಕಾರ್ಯಕ್ರಮವು ಇಂದು ಸಂಜೆ ೫:೦೦ಗಂಟೆಗೆ ಶ್ರೀ ಗವಿಮಠದ ಕೆರೆಯ ದಡದಲ್ಲಿ ಜರುಗಿತು. ಧಾರವಾಡದ ಹೆಸರಾಂತ ಕಲಾವಿದರಾದ ಎಸ್.ಎಸ್ ಹಿರೇಮಠ ಹಾಗೂ ಸಂಗಡಿಗರು ಮತ್ತು ಹರ್ಲಾಪೂರದ ಶ್ರೀ ಸಿ.ವಿ ಸಿ.ಡಿ ಕಲಾ ತಂಡದವವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಶ್ರೀ ಮಠದ ಸಂಪ್ರದಾಯದAತೆ ಗಂಗಾರತಿ ಜರುಗಿತು. ನಂತರ ಗುಜಮಾಗಡಿ ಗ್ರಾಮದವರಾದ ಈಶ್ವರಯ್ಯ ಮತ್ತು ಶಂಕ್ರಮ್ಮ ಹಿರೇಮಠ ಹಾಗೂ ಮನ್ನಾಪುರ ಗ್ರಾಮದವರಾದ ಈಶ್ವರಯ್ಯ ಸುನಂದ ಹಿರೇಮಠ ದಂಪತಿಗಳವರು ಸಂಕಲ್ಪ ಪೂಜೆ ನೆರವೇರಿಸಿ, ತೆಪ್ಪೋಸ್ಸವಕ್ಕೆ ಚಾಲನೆ ನೀಡಿದರು.
ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು, ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕೃತಗೊAಡ ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮಂಗಳವಾದ್ಯಗÀಳೊAದಿಗೆ ಕರೆ ತಂದು ಮೂಹೂರ್ತಗೊಳಿಸಲಾಯಿತು. ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾಧಿಗಳು ಹಗ್ಗದ ಮೂಲಕ ಹಾಗೂ ನಾವಿಕರ ಸಹಾಯದಿಂದ ಹುಟ್ಟು ಹಾಕಿ ಎರಡು ಸುತ್ತು ಪ್ರದಕ್ಷೀಣೆಯನ್ನು ಹಾಕಲಾಯಿತು. ಪ್ರದಕ್ಷೀಣೆ ಸಂದರ್ಭದಲ್ಲಿ ಶಕುಂತಲಾ ಭಿನ್ನಾಳ ಹಾಗೂ ಸಂಗಡಿಗರಿAದ ಶ್ರೀ ಗವಿಮಠಾಧೀಶ ಮಂಗಳ ಗೀತೆಯ ಸಂಗೀತ ಕಾರ್ಯಕ್ರಮ ಜರುಗಿತು. ಬಳಗಾನೂರಿನ ಶಿವಶಾಂತವೀರ ಮಹಾಸ್ವಾಮಿಗಳು, ಬಿಜಕಲ್‌ನ ಶ್ ಶಿವಶಾಂತವೀರ ಶರಣರು, ಬಿಜಕಲ್‌ನ ಗುಲಗಂಜಿ ಮಠದ ಶಿವಲಿಂಗ ಮಹಾಸ್ವಾಮೀಗಳು, ಬೂದಿಹೊಸಳ್ಳಿಯ ಭೂದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ತೆಪ್ಪೋತ್ಸವ ವಿಶೇಷತೆ: ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ.ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಮಹಾಮಹಿಮ ಕತೃ ಗವಿಶಿದ್ಧೇಶನನ್ನು ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ. ತೆಪ್ಪೋತ್ಸವ ಎಂದರೆ ಭಾವಿ, ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವವೆಂದು ಅರ್ಥ. ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕೃತಗೊAಡ ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮಂಗಳವಾದ್ಯಗÀಳೊAದಿಗೆ ಕರೆ ತಂದು ಮೂಹೂರ್ತಗೊಳಿಸಿದ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾಧಿಗಳು ಹಗ್ಗದ ಮೂಲಕ ಹಾಗೂ ನಾವಿಕರ ಸಹಾಯದಿಂದ ಹುಟ್ಟು ಹಾಕಿ ಸಾಗಿಸುತ್ತಾರೆ.
ಸುಂದರ ವಾತಾವರಣದ ಶುಭ ಸಾಯಂಕಾಲ ಸೂರ್ಯನ ಬಂಗಾರ ಕಿರಣ ನಿರ್ಗಮನ, ಚಂದ್ರನ ಬೆಳಕಿನ ಕಿರಣಗಳ ಆಗಮನದಲ್ಲಿ ಜರುಗುವ ಈ ಮಹೋತ್ಸವ ಭಕ್ತರನ್ನು ಆನಂದದಲ್ಲಿ ಭಕ್ತಿಯಲ್ಲಿ ತೇಲಾಡಿ ಮಂತ್ರಮುಗ್ದಗೊಳಿಸುತ್ತದೆ. ವಿದ್ಯುತ್ ದೀಪಾಲಂಕಾರದಿAದ ಶೃಂಗಾರಗೊAಡ ಶ್ರೀ ಗವಿಮಠದ ಆವರಣದ ಪುಷ್ಕರಣಿಯು ಅಕ್ಷರಶಃ ಸರೋವರದಂತೆ ಕಾಣುವ ಶ್ರೀ ಮಠದ ಕೆರೆಯು ನೋಡಲು ಸುಂದರ, ಮನೋಹರವಾಗಿ ಕಾಣುವುದು.ನಿಸರ್ಗದ ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊAಡ ತೆಪ್ಪವು ದೈವದ ತೊಟ್ಟಿಲಿನಂತೆ ತೆಲುತ್ತ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತನ್ನ ಮಡಿಲಲ್ಲಿ ಆಸಿನ ಗೊಳಿಸುಕೊಂಡು ತೂಗುತ್ತಾ, ತೊನೆಯುತ್ತಾ ಭಕ್ತರ ಮನಗಳನ್ನು ತಣಿಸುತ್ತದೆ.ಸುಗಂಧ ಭರಿತ ಪುಷ್ಪಗಳಿಂದ ಅಲಂಕಾರಗೊAಡ ತೆಪ್ಪವು ನೋಡಲು ಸುಂದರ ಮನೋಹರ. ಭವ್ಯ ಮೆರವಣಿಗೆಯಿಂದ ಪಲ್ಲಕ್ಕಿಯಲ್ಲಿ ಸಾವಿರಾರು ಭಕ್ತರ ನಡುವೆ ವಿರಾಜಮಾನರಾದ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತೆಪ್ಪದಲ್ಲಿ ಪ್ರತಿಷ್ಠಾಪಿಸಿದಾಗ ನೆರೆದ ಲಕ್ಷೆÆÃಪಲಕ್ಷ ಭಕ್ತರ ಮನವು ಸ್ವರ್ಗವೇ ಧರೆಗಿಳಿದಂತೆ ಪುಳಕಗೊಳ್ಳುವದು. ಶ್ರೀ ಗವಿಸಿದ್ಧೇಶ್ವರನ ಮೂರ್ತಿಯನ್ನು ಹೊತ್ತು ಕೆರೆಯ ಕಮಲದಂತೆ ಸುಂದರವಾದ ತೆಪ್ಪವು ತನ್ನ ಮಡಿಲಿನಲ್ಲಿ ಸದ್ಗುರು ಶ್ರೀ ಗವಿಸಿದ್ಧೇಶ್ವರರನ್ನು ಹೊತ್ತು ಪುಷ್ಪವೇ ತೇಲಾಡುವಂತೆ ಸಾಗಿ ಕೆರೆಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಪುಳಕಗೊಂಡು ಪುನಿತರಾಗುತ್ತಾರೆ. ಶ್ರೀ ಗವಿಸಿದ್ಧೇಶ್ವರರು ಕತೃ ಗದ್ದುಗೆಯಿಂದ ಎದ್ದುಬಂದು ಎಲ್ಲರನ್ನು ಹರಸಿದಂತಾಗಿ ಹರ್ಷದ ಝೇಂಕಾರ ಮೊಳಗಿಸಿ ಪರಮಾನಂದ ಪಡುವದೇ ತೆಪ್ಪೋತ್ಸವ. ಇಂತಹ ಶುದ್ಧ ಭಕ್ತಯಿಂದ ಒಡಗೂಡಿದ ಉತ್ತಮ ಶ್ರೀ ಮಠದ ಮನಮೋಹಕ, ಭಕ್ತಿ ಪ್ರಧಾನಕ ಉತ್ಸವವಿರುವದು ಶ್ರೀಮಠದ ವೈಶಿಷ್ಟತೆ. ‘ತಿರುಪತಿಯಲ್ಲಿ ಬ್ರಹ್ಮೋತ್ಸವ ಕೊಪ್ಪಳದಲ್ಲಿ ತೆಪ್ಪೋತ್ಸವ’ಎಂದು ಆಗಮಿಸಿದ ಭಕ್ತರು ಆನಂದದಿAದ ಮನತುಂಬಿ ಸಂತಸದಿAದ ಹಾಡುತ್ತಾರೆ. ಅವರ ಉತ್ಸಾಹ ನಿಜಕ್ಕೂ ಸುಂದರ ಸುಂದರ..