ಅಕ್ರಮ ಸಂಬಂಧ ಶಂಕೆ : ಹೆಂಡತಿಯನ್ನು ಕೊಲೆಗೈದ ಗಂಡ
ಕೊಪ್ಪಳ : ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಹೆಂಡತಿಯನ್ನು ಗಂಡ ಕೊಲೆಗೈದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಗವಿಮಠ ಜಾತ್ರ ಮೇಳದ ಆವರಣದ ಹಿಂದೆ ಈ ಘಟನೆ ನಡೆದಿದೆ. ಭಾಂಡೆ ಸಾಮಾನು ಮಾರಾಟ ಮಾಡಲು ಬಂದಿದ್ದ ಗಂಡ ಹೆಂಡತಿ ನಡುವೆ ಆಗಾಗ ಜಗಳ ಆಗುತ್ತಿತ್ತು ಎನ್ನಲಾಗಿದೆ ಇಂದು ಅತಿರೇಕಕ್ಕೆ ಹೋಗಿದ್ದು ಗಂಡ ಚಾಕುವಿನಿಂದ ಹೆಂಡತಿ ಗೀತಾಳ ಮೇಲೆ ಹಲ್ಲೆ ಮಾಡಿದ್ದಾನೆ.. ಗಾಯಗೊಂಡ ಗೀತಾಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗುತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಗಂಡ ರಾಜೇಶ್ ನನ್ನು ಕೊಪ್ಪಳ ಪೋಲೀಸರು ಬಂಧಿಸಿದ್ದಾರೆ. ಆರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೀತಾ ಹಾಗೂ ರಾಜೇಶ್ ತುಮಕೂರು ಜಿಲ್ಲೆಯ ತುರುವೇಕೆರೆ ಬಳಿಯ ಗ್ರಾಮದವರು ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಂಡೆ ಸಾಮಾನುಗಳ ಅಂಗಡಿಯನ್ನು ಹಾಕಲು ಬಂದಿದ್ದವರು. ಶಂಕೆಯಿಂದ ಹೆಂಡತಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ ಆರೋಪಿಯನ್ನು ಬಂಧಿಸಲಾಗಿದೆ-
ಡಾ. ರಾಮ್ ಎಲ್ ಅರಸಿದ್ದಿ
ಎಸ್ ಪಿ ಕೊಪ್ಪಳ