ಕೊಪ್ಪಳ ಪ್ರಾಧಿಕಾರದ ನೂತನ ಅಧ್ಯಕ್ಷ ಶ್ರೀನಿವಾಸ ಗುಪ್ತಾರವರಿಗೆ ಸನ್ಮಾನ
ಭಾಗ್ಯನಗರ: ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಸಂಸ್ಥೆಯ ನಿರ್ದೆಶಕರಾದ ಶ್ರೀನಿವಾಸ ಗುಪ್ತಾರವರು ಕೊಪ್ಪಳ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸನ್ಮಾನ ಸಮಾರಂಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಭಾಗವಹಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ಅವರು ಸನ್ಮಾನಿತರಾದ ಶ್ರೀನಿವಾಸ ಗುಪ್ತಾ ಅವರ ಬಗ್ಗೆ ಪ್ರಾಸ್ತಾವಿಕತೆಯನ್ನು ನೆರವೇರಿಸಿ ಸಂಸ್ಥೆಗೆ ಕೊಡಮಾಡಿದ ಸಹಾಯ ಹಸ್ತದ ಬಗ್ಗೆ ಪುನರುಚ್ಛರಿಸಿದರು. ಹಾಗೆ ಸನ್ಮಾನಿತರ ಪರಿಚಯವನ್ನು ನಿರ್ದೆಶಕರಾದ ಹೆಚ್.ಕೆ ನಿರಂಜನ ಸಂಕ್ಷಿಪ್ತವಾಗಿ ಅವರ ಸಾಧನೆಯ ಪಕ್ಷಿನೋಟವನ್ನು ನೆರವೇರಿಸಿದರು. ನಂತರ ಸನ್ಮಾನಿತಗೊಂಡ ಶ್ರೀನಿವಾಸ ಗುಪ್ತಾ ಅವರು ಸಂಸ್ಥೆಯ ಶ್ರೇಯೊಭಿವೃದ್ಧಿಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ, ಉಪಾಧ್ಯಕ್ಷರಾದ ಉಮಾಕಾಂತಸಾ ಕಠಾರೆ, ಕಾರ್ಯದರ್ಶಿಗಳಾದ ಸತೀಷ ಮೇಘರಾಜ, ಖಜಾಂಚಿಗಳಾದ ಉಮೇಶ ಕಬ್ಬೇರ, ನಿರ್ದೇಶಕರಾದ ಪೆದ್ದಸುಬ್ಬಯ್ಯ, ಜವಾಹರಲಾಲಸಾ ಅಂಟಾಳಮರದ, ಲಕ್ಷ್ಮಣಸಾ ನಾರಾಯಣಸಾ ನಿರಂಜನ, ಹನುಂತಸಾ ನಿರಂಜನ, ಸುರೇಶ ಪೆದ್ದಿ, ಕೃಷ್ಣ ಕಬೇರ, ಮಾರುತಿ ಮೆಘರಾಜ ಉಪಸ್ಥಿತರಿದ್ದರು, ಕೊನೆಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.