ಗಂಗಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಗ್ರಹಣ ಸಮಾರಂಭ
ಗಂಗಾವತಿ: ಜನವರಿ-೫ ರವಿವಾರ ಗಂಗಾವತಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ತಾಲೂಕು ಘಟಕ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆಗಳ ಸಮಾರಂಭ ಜರುಗಲಿದೆ.
ಉದ್ಘಾಟನೆಯನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ ನೆರವೇರಿಸಲಿದ್ಧಾರೆ. ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕರಾದ ಗಾಲಿ ಜನಾರ್ಧನರೆಡ್ಡಿ ಮಾಡಲಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸಂಸದರಾದ ರಾಜಶೇಖರ ಹಿಟ್ನಾಳ ನೆರವೇರಿಸಲಿದ್ದಾರೆ. ಪುಸ್ತಕ ಲೋಕಾರ್ಪಣೆಯನ್ನು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಕೆರೂರು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಲ್ಲಪ್ಪ ಟಿ. ಹೊಸೂರು ಆಗಮಿಸಲಿದ್ದಾರೆ. ಗೌರವಾನ್ವಿತರಾಗಿ ಕೇಂದ್ರ ಕಸಾಪ ಸಂಘ-ಸಂಸ್ಥೆ ಪ್ರತಿನಿಧಿಯಾದ ಶ್ರೀ ನಬಿಸಾಬ್ ಕುಷ್ಟಗಿ, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರು ಹಾಗೂ ಕನಕಗಿರಿ ೪ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಶರಣಬಸಪ್ಪ ಕೋಲ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ರಮೇಶ ಗಬ್ಬೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಜಮೀರ ನಂದಾಪುರ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾದ ಡಾ. ಜಾಜಿ ದೇವೆಂದ್ರಪ್ಪ ಉಪಸ್ಥಿತರಿರಲಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿಯವರು ನೂತನ ಅಧ್ಯಕ್ಷರಾದ ರುದ್ರೇಶ ಎಂ. ಆರ‍್ಹಾಳ ರವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಹಾಗೂ ನವಲಿ ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಲಿಂಗಾರೆಡ್ಡಿ ಆಲೂರುರವರು ದಿಕ್ಸೂಚಿ ನುಡಿಗಳನ್ನು ಆಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರವರ್ಗದವರು, ಸಾಹಿತಿಗಳು, ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರುಗಳು ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಸಾಪ ಆಜೀವ ಸದಸ್ಯರು, ದೃಶ್ಯ ಮತ್ತು ಶ್ರವ್ಯ ಮಾದ್ಯಮ ಬಂಧುಗಳು, ಗುರು-ಹಿರಿಯರು, ಎಲ್ಲಾ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ನೂತನ ತಾಲೂಕ ಅಧ್ಯಕ್ಷರಾದ ರುದ್ರೇಶ ಎಂ. ಆರ‍್ಹಾಳರವರು , ಗೌರವ ಕಾರ್ಯದರ್ಶಿಗಳಾದ ಶಿವಾನಂದ ತಿಮ್ಮಾಪುರ, ರಮೇಶ ಬಾಳೇಕಾಯಿ ವಿನಂತಿಸಿಕೊಂಡಿದ್ದಾರೆ.