ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರಕಟ : ಸಿರಾಜ್ ಬಿಸರಳ್ಳಿ, ಹೆಚ್.ಎಸ್.ಹರೀಶ್ ರಿಗೆ,  ವಾರ್ಷಿಕ  & ಅಖಿಲ್ ಉಡೇವುರಿಗೆ ದತ್ತಿ ಪ್ರಶಸ್ತಿ

0

Get real time updates directly on you device, subscribe now.

 

ಕೆ. ಮಲ್ಲಿಕಾರ್ಜುನ ಸಾಣಾಪೂರ

ಸಿರಾಜ್ ಬಿಸರಳ್ಳಿ, ಹೆಚ್.ಎಸ್.ಹರೀಶ್    ಕೆ. ಮಲ್ಲಿಕಾರ್ಜುನ ಸಾಣಾಪೂರ      ರಿಗೆ  ವಾರ್ಷಿಕ  & ಅಖಿಲ್ ಉಡೇವುರಿಗೆ ದತ್ತಿ ಪ್ರಶಸ್ತಿ   ಬೆಂಗಳೂರು : ರಾಜ್ಯ ಮಾಧ್ಯಮ ಅಕಾಡಮಿಯು 2023 ಹಾಗೂ 2024ನೇ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದೆ.
ಪತ್ರಿಕೋದ್ಯಮದ ಸೇವೆಯನ್ನು ಪರಿಗಣಿಸಿ ಜಿಲ್ಲೆಯ ಸಿರಾಜ್ ಬಿಸರಳ್ಳಿ , ಹೆಚ್.ಎಸ್.ಹರೀಶ್ರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಹಾಗೂ ಅಖಿಲ್ ಉಡೇವು ರಿಗೆ ದತ್ತಿ  ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ೨೦೨೩ನೇ ಸಾಲಿನ ಪ್ರಶಸ್ತಿಗೆ ಸಿರಾಜ್ ಬಿಸರಳ್ಳಿ,      ಕೆ. ಮಲ್ಲಿಕಾರ್ಜುನ ಸಾಣಾಪೂರ  ಹಾಗೂ ೨೦೨೪ನೇ ಸಾಲಿನ ಪ್ರಶಸ್ತಿಯನ್ನು ಹೆಚ್.ಎಸ್. ಹರೀಶ್ ರಿಗೆ  ಘೋಷಣೆ ಮಾಡಲಾಗಿದೆ.  ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ‘ಕೊಪ್ಪಳ ಜಿಲ್ಲೆಯಲ್ಲಿ ಬೇರೂರಿರುವ ಅಸ್ಪೃಶ್ಯತೆ’ ವರದಿಗಾಗಿ ಕೊಪ್ಪಳದ ವಾರ್ತಾಭಾರತಿ ವರದಿಗಾರ ಮುಹಮ್ಮದ್ ಅಖೀಲ್ ಉಡೇವು ಅವರನ್ನು ಆಯ್ಕೆ ಮಾಡಲಾಗಿದೆ.
2023ನೆ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಹಾಗೂ 2024ನೆ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ʼವಾರ್ತಾಭಾರತಿʼ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆಯವರನ್ನು ಆಯ್ಕೆ ಮಾಡಲಾಗಿದೆ.
2023ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಗಂಗಾಧರ ಮೊದಲಿಯಾರ್, ಪ್ರೊ.ಉಷಾರಾಣಿ ಎನ್., ಸುಶೀಲೇಂದ್ರ ನಾಯಕ್, ವಾಸುದೇವ ಹೊಳ್ಳ, ಆಲ್ಫ್ರೈಡ್ ಟೆನ್ನಿಸನ್, ಮಾಲತಿ ಭಟ್, ಮನು ಅಯ್ಯಪ್ಪ, ಹರಿಯಬ್ಬೆ ಹೆಂಜಾರಪ್ಪ, ವಿಲಾಸ್ ನಾಂದೋಡ್ಕರ್, ಶಿವಕುಮಾರ್ ಬೆಳ್ಳಿತಟ್ಟೆ, ಸಿದ್ದಯ್ಯ ಹಿರೇಮಠ, ಶಶಿಕಾಂತ್ ಶೆಂಬಳ್ಳಿ, ಮನೋಜ್ಗೌಕಡ ಪಾಟೀಲ್, ಆನಂದ ಬೈದನಮನೆ, ಮಧು ಜವಳಿ. ಎಂ.ಆರ್.ದಿನೇಶ್, ತಾರಾನಾಥ್, ಕೆ.ಮಲ್ಲಿಕಾರ್ಜುನ ಸಾಣಾಪೂರ, ಜಯಪ್ರಕಾಶ್, ಪುಂಡಲೀಕ ಭೀ.ಬಾಳೋಜಿ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು(ಪುಂಡಲೀಕ ಪೈ), ನಿಹಾಲ್ ಕಿದ್ವಾಯಿ, ರೋಹಿಣಿ ಸ್ವಾಮಿ, ಭಾವನಾ ನಾಗಯ್ಯ, ಮುನೀರ್ ಅಹ್ಮದ್ ಆಝಾದ್, ಹನುಮಾನ್ ಸಿಂಗ್ ಜಮಾದಾರ್, ಜೈಮುನಿ, ಶಿವಮೂರ್ತಿ ಗುರುಮಠ ಹಾಗೂ ಸಿರಾಜ್ ಬಿಸ್ರಳ್ಳಿ.

ಅಭಿಮಾನಿ ದತ್ತಿ ಪ್ರಶಸ್ತಿ: ಕನ್ನಡಮ್ಮ ಪತ್ರಿಕೆಯಲ್ಲಿ ಪ್ರಕಟವಾದ ‘ಕೆವೈಸಿ ಅಪ್ಡೇನಟ್ ಮಾಡಲು ಮುಗಿಬಿದ್ದ ಜನ, ಬೆಳ್ಳಂಬೆಳಿಗ್ಗೆ ಕ್ಯೂ’ ವರದಿಗಾಗಿ ಧಾರವಾಡದ ರವಿಕುಮಾರ ಚನ್ನಬಸಪ್ಪ ಕಗ್ಗಣ್ಣವರ ಹಾಗೂ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಲೆಯೊಳಗೆ ಬುದ್ಧಿವಂತರು’ ವರದಿಗಾಗಿ ವಿಜಯ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ದಿಗಂತ ದತ್ತಿ ಪ್ರಶಸ್ತಿ: ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ‘ಕೆರೆ ನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರು’ ವರದಿಗೆ ಹುಬ್ಬಳ್ಳಿಯ ಶಿವಾನಂದ ಗೊಂಬಿಯವರನ್ನು ಆಯ್ಕೆ ಮಾಡಲಾಗಿದೆ.

ಅಭಿಮನ್ಯು ಪ್ರಶಸ್ತಿ: ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಬೀಡಿಯಿಂದ ಕಮರಿದ ಕನಸು’ ವರದಿಗೆ ಮಂಗಳೂರಿನ ಸಂಧ್ಯಾ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ‘ಮ್ಯಾನ್ಯುವೆಲ್ ಸ್ಕ್ಯಾವೆಂಜರಿಂಗ್ ಸ್ಟಿಂಕಿಂಗ್ ಟ್ರೂಥ್’ ವರದಿಗೆ ಮೈಸೂರಿನ ಶಿಲ್ಪಾ ಪಿ.ಯವರನ್ನು ಆಯ್ಕೆ ಮಾಡಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ: ಕೆ.ನೀಲಾ(ಕಲಬುರಗಿ) ಅವರನ್ನು ಮಾಡಲಾಗಿದೆ.
ಮಾಧ್ಯಮ ಮಹಾಸಾಧಕ ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿ: ಕ.ಮ.ರವಿಶಂಕರ್(ಕನ್ನಡಪ್ರಭ-ಚಿತ್ರದುರ್ಗ)
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ: ವಿ.ವೆಂಕಟೇಶ್
ಆಂದೋಲನ ಪ್ರಶಸ್ತಿ: ಸಂಜೆ ದರ್ಶನ
ಬಸವರಾಜ ದೊಡ್ಡಮನಿ ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ: ಎಚ್.ಪಿ.ಪುಣ್ಯವತಿ,
ಅರಗಿಣಿ ಪ್ರಶಸ್ತಿ: ತುಂಗರೇಣುಕಾ ಅವರನ್ನು ಆಯ್ಕೆ ಮಾಡಲಾಗಿದೆ.  2024ನೆ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಪ್ರೊ.ಎ.ಎಸ್.ಬಾಲಸುಬ್ರಹ್ಮಣ್ಯ, ರಿಷಿಕೇಷ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ, ಟಿ.ಗುರುರಾಜ್, ಕುಮಾರನಾಥ್ ಯು.ಕೆ., ಸಿದ್ದು ಕಾಳೋಜಿ, ಆರ್.ಕೆ.ಜೋಶಿ, ಪ್ರಕಾಶ್ ಶೇಠ್, ಆರುಂಡಿ ಶ್ರೀನಿವಾಸಮೂರ್ತಿ, ರವೀಶ್ ಎಚ್.ಎಸ್., ಭಾನುಪ್ರಕಾಶ್, ಮಹೇಶ ಶೆಟಗಾರ, ರಮೇಶ್ ಜಹಗೀರದಾರ, ನಿರುಪಮಾ, ದಿನೇಶ್ ಗೌಡಗೆರೆ, ಡಿ.ಸಿ.ಮಹೇಶ್, ಎಚ್.ಎಸ್.ಹರೀಶ್.ಶರಣಯ್ಯ ಒಡೆಯರ್, ಅಶ್ವಿನಿ ಎಂ.ಶ್ರೀಪಾದ, ರಿಝ್ವಾನ್ ಅಸದ್, ಬನ್ನಿಕಾಳಪ್ಪ, ಮನುಜಾ ವೀರಪ್ಪ, ಜಯಂತ್ ಜೆ., ವಿಖಾರ್ ಅಹ್ಮದ್ ಸಯೀದ್, ಡಿ.ಎನ್.ಶಾಂಭವಿ ನಾಗರಾಜ್, ರಮೇಶ್(ಹಾಬಿ ರಮೇಶ್), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, ಅನೀಸ್ ನಿಸಾರ್ ಹಮೀದ್ ಹಾಗೂ ಸಂದೀಪ್ ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ‘ಕೊಪ್ಪಳ ಜಿಲ್ಲೆಯಲ್ಲಿ ಬೇರೂರಿರುವ ಅಸ್ಪೃಶ್ಯತೆ’ ವರದಿಗಾಗಿ ಕೊಪ್ಪಳದ ವಾರ್ತಾಭಾರತಿ ವರದಿಗಾರ ಮುಹಮ್ಮದ್ ಅಖೀಲ್ ಉಡೇವು ಅವರನ್ನು ಆಯ್ಕೆ ಮಾಡಲಾಗಿದ

ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ: ಹಿರಿಯ ಸಾಹಿತಿ ರಹಮತ್ ತರೀಕೆರೆ, ಮಾಧ್ಯಮ ಮಹಾಸಾಧಕ ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿ: ಮಂಗಳೂರಿನ ಮ್ಯುರಿಯಲ್ ನಿರ್ಮಲಾ ಡಿ’ಸಿಲ್ವ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ: ಎಚ್.ಎಸ್.ಸುಧೀಂದ್ರ ಕುಮಾರ್, ಆಂದೋಲನ ಪ್ರಶಸ್ತಿ: ಹೊಸಪೇಟೆ ಟೈಮ್ಸ್, ಬಸವರಾಜ ದೊಡ್ಡಮನಿ ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ: ಕೀರ್ತನಾ ಕುಮಾರಿ ಕೆ.(ಕೀರ್ತಿ ಶೇಖರ ಕಾಸರಗೋಡು) ಹಾಗೂ ಹಾಸನ ಜಿಲ್ಲೆಯ ವೆಂಕಟೇಶ್, ಅರಗಿಣಿ ಪ್ರಶಸ್ತಿ: ಶ್ಯಾಮ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!