ಅಂಬೇಡ್ಕರ್ ಅವರು ಇಡೀ ವಿಶ್ವವೇ ಗೌರವಿಸುವ ವಿಶ್ವರತ್ನ: ಡಾ. ಲಿಂಗಣ್ಣ
ಗಂಗಾವತಿ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೮ನೇ ವ?ದ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಾಗೂ ಆಲ್ ಇಂಡಿಯಾ ಬಹುಜನ ವಿದ್ಯಾರ್ಥಿ ಪರಿ?ತ್ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಪ್ರಬಂಧ ಸ್ಪರ್ಧೆಯನ್ನು ಡಿಸೆಂಬರ್೦೬ ರಂದು ನಡೆಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸನ್ಮಾನ ಸಮಾರಂಭವನ್ನು ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರದಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಮೌಲಸಾಬ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಾತಃಸ್ಮರಣೀಯರು. ಅಖಂಡ ಭಾರತಕ್ಕೆ ಸಾಮಾಜಿಕ ನ್ಯಾಯ ನೀಡುವಂತಹ ಅಮೋಘವಾದ ಸಂವಿಧಾನವನ್ನು ರಚಿಸಿದವರು. ಆ ಮಹಾನುಭಾವನ ಶ್ರಮದಿಂದಾಗಿ ಇಂದು ನಾವೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳು ಅಂಬೇಡ್ಕರ್ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರಂತೆ ಶ್ರಮಪಟ್ಟು ಜೀವಿತಾವಧಿಯ ಅತ್ಯುನ್ನತ ಸ್ಥಾನಮಾನವನ್ನು ಸಂಪಾದಿಸುವ ಗುರಿ ಹೊಂದಬೇಕು. ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಬಗ್ಗೆ ಸಂಪೂರ್ಣ ಜ್ಞಾನ ಒದಗಿಸುವ ನಿಟ್ಟಿನಲ್ಲಿ ಶಂಕರ್ ಸಿದ್ದಾಪುರ ಮತ್ತು ಅವರ ತಂಡ ಈ ಪ್ರಬಂಧ ಸ್ಪರ್ಧೆ ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಉಪನ್ಯಾಸಕ, ಸಾಹಿತಿ ಡಾ. ಲಿಂಗಣ್ಣ ಜಂಗಮರಹಳ್ಳಿ ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಇಂದಿನ ಯುವಕರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಸಾಕ? ತಪ್ಪು ತಿಳುವಳಿಕೆಗಳಿವೆ. ಅಂಬೇಡ್ಕರ್ ಅವರು ಕೇವಲ ದಲಿತರಿಗಾಗಿ ಹೋರಾಡಿದ್ದಾರೆ. ದಲಿತರ ಏಳ್ಗೆಗಾಗಿ ಸಂವಿಧಾನ ರಚಿಸಿದ್ದಾರೆ ಎಂಬ ತಪ್ಪು ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅಂಬೇಡ್ಕರ್ ಅವರು ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ವಿಜ್ಞಾನ ಶಾಸ್ತ್ರ, ವೈದ್ಯ ಶಾಸ್ತ್ರ ಸೇರಿದಂತೆ ಒಟ್ಟು ೬೪ ವಿದ್ಯೆಗಳಲ್ಲಿ ಸಂಪೂರ್ಣ ಪರಿಪೂರ್ಣತೆಯನ್ನು ಸಾಧಿಸಿದ್ದರು. ಮನುಸ್ಮೃತಿಯನ್ನು ಸುಡುವ ಮೂಲಕ ಭಾರತದಲ್ಲಿ ತಾಂಡವವಾಡುತ್ತಿದ್ದ ಮೌಢ್ಯ, ಕಂದಾಚಾರ, ಧಾರ್ಮಿಕ ನೆಪದಲ್ಲಿ ಶೋ?ಣೆ ಮಾಡುತ್ತಿದ್ದ ಕೆಲವು ಕಟ್ಟುಪಾಡುಗಳನ್ನು ತೊರೆದು ಹಾಕಿದರು. ಅಂಬೇಡ್ಕರ್ ಅವರನ್ನು ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಗೌರವಿಸುತ್ತದೆ. ಈ ಜಗತ್ತು ಕಂಡ ವಿಶ್ವರತ್ನ ಡಾ. ಬಿ.ಆರ್.ಅಂಬೇಡ್ಕರ್ ಎಂದು ತಿಳಿಸಿದರು.
ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ೧೦ ಜನ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಾಮೀದ್ ಮನಿಯಾರ್, ದಲಿತ ಮುಖಂಡ ಹುಸೇನಪ್ಪ ಸ್ವಾಮಿ ಮಾದಿಗ, ಮಾರೇಶ್ ಮು?ರ್, ಪ್ರಥಮ ದರ್ಜೆ ಗುತ್ತೇದಾರಾರರು, ದಲಿತ ಯುವ ಮುಖಂಡರಾದ ದುರುಗೇಶ್ ದೊಡ್ಡಮನಿ, ಡಿ.ಎಸ್.ಎಸ್ ರಾಜ್ಯ ನಾಯಕರು ವಕೀಲರಾದ ಹುಸೇನಪ್ಪ ಹಂಚಿನಾಳ, ಎಐಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗ್ಗೇಶ ಮೌರ್ಯ ಸಿಂಧನೂರು, ಎಐಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಗುಮಗೇರಾ, ರೈತ ಸಂಘದ ರಾಜ್ಯ ಅಧ್ಯಕ್ಷರಾದ ಶರಣಗೌಡ ಕೇಸರಟ್ಟಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಕೊತ್ವಲ್, ಸಾಹಿತಿಗಳಾದ ರಮೇಶ ಗಬ್ಬೂರು, ಡಾ. ಸೋಮಕ್ಕ, ಹಿರಿಯ ಪತ್ರಕರ್ತ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ಕರ್ನಾಟಕ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ ದೇವಿಕೇರಿ, ಹಿರಿಯ ಪತ್ರಕರ್ತ ಪ್ರಸನ್ನ ದೇಸಾಯಿ, ಕಾರ್ಯಕ್ರಮ ಸಂಯೋಜಕರು ವಕೀಲರಾದ ಶಂಕರ ಸಿದ್ದಾಪುರ, ಬಿವಿಎಫ್ ಜಿಲ್ಲಾಧ್ಯಕ್ಷ ಭೀಮಪ್ಪ ಮೈಲಾಪುರ, ಹೊನ್ನೂರು ಸಿದ್ದಾಪುರ, ಅಯ್ಯಪ್ಪ ಮೈಲಾಪುರ, ಭೀಮರಾಯ ಕಾಟಾಪುರ ಸೇರದಂತೆ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು
ಪ್ರಥಮ ಬಹುಮಾನ ವ? ತಂದೆ ಉಳಿಕಾಶಿ, ೧೦ನೇ ತರಗತಿ, ಶ್ರೀ ಎಂ.ಎನ್.ಎಂ. ಹೈಸ್ಕೂಲ್, ಗಂಗಾವತಿ.
ದ್ವಿತೀಯ ಬಹುಮಾನ ರೂಪಾ ತಂದೆ ತಿಪ್ಪೇಸ್ವಾಮಿ, ಪಿಯುಸಿ, ಶ್ರೀ ಎಂ.ಎನ್.ಎಂ. ಕಾಲೇಜ್, ಗಂಗಾವತಿ.
ತೃತೀಯ ಬಹುಮಾನ ಕೆ.ಯಶವಂತ ತಂದೆ ಕೆ.ಕೊಟ್ರೇಶ, ದ್ವಿತೀಯ ಪಿಯುಸಿ, ಬಾಲಕರ ಪದವಿಪೂರ್ವ ಕಾಲೇಜ್, ಗಂಗಾವತಿ ]
ಸೇರಿದಂತೆ ಉಳಿದ ಏಳು ಜನ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ವಿಜೇತರಾಗಿದ್ದಾರೆ. ಎಐಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಗುಮಗೇರಾ ಅವರು ವಿಜೇತ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನವನ್ನು ನೀಡಿ ಶುಭ ಹಾರೈಸಿದರು.