ಜಾತ್ರಾ ಮಹೋತ್ಸವಕ್ಕಾಗಿ ಸಿದ್ದಗೊಳ್ಳುತ್ತಿರುವ ಜಾತ್ರಾ ಮೈದಾನ
ಕೊಪ್ಪಳ: ದಕ್ಷಿಣ ಭಾರತದ ಕುಂಭಮೆಳ ಎಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಜನೇವರಿ ೧೫ ರಂದು ಜರುಗುವ ಪ್ರಯುಕ್ತ ಜಾತ್ರಾ ಸಿದ್ದತೆಗಳು ಭರದಿಂದ ಸಾಗುತ್ತಲಿವೆ. ಇಂದು ರಥೋತ್ಸವ ಸಾಗುವ ಮೈದಾನ ಹಾಗೂ ಅಂಗಡಿ ಮುಂಗಟ್ಟುಗಳನ್ನು ಹಾಕುವ ಜಾತ್ರಾ ಆವರಣವನ್ನು ಇಟ್ಯಾಚಿ, ಡೋಜರ್ ಮತ್ತಿತರ ಯಂತ್ರಗಳ ನೆರವಿನಿಂದ ನೆಲವನ್ನು ಸಮತಟ್ಟು ಮಾಡಿ ಸ್ವಚ್ಛಗೊಳಿಸುವ ಕಾರ್ಯ ಕೆಲಸ ಬಿರುಸಿನಿಂದ ಸಾಗುತ್ತಲಿವೆ. ಈ ಕಾರ್ಯಗಳು ಮುಂಬರುವ ಜಾತ್ರೆಗೆ ಹೆಚ್ಚಿನ ಮೆರಗು ತಂದುಕೊಡಲಿದೆ.
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವದ ನಿಮಿತ್ಯ ಜರುಗುವ ವಿವಿಧ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ
ಕಾರ್ಯಕ್ರಮಗಳ ವಿವರ
ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವದ ನಿಮಿತ್ಯ ಜರುಗುವ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ದಿನಾಂಕ ೧೧-೦೧-೨೦೨೫, ಶನಿವಾರ, ಸಂಜೆ ೫.೦೦ ಗಂಟೆಗೆ ಬಸವಪಟ ಕಾರ್ಯಕ್ರಮ,
ದಿನಾಂಕ ೧೨-೦೧-೨೦೨೫ ರವಿವಾರ, ಸಂಜೆ ೫.೦೦ ಗಂಟೆಗೆ,ಶ್ರೀ ಗವಿಮಠ ಆವರಣದಲ್ಲಿನ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ,
ದಿನಾಂಕ ೧೩-೦೧-೨೦೨೫ ಸೋಮವಾರ, ಸಂಜೆ: ೫ ಘಂಟೆಗೆ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸದ ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ,
ದಿನಾಂಕ ೧೪-೦೧-೨೦೨೫ ಮಂಗಳವಾರ ಸಂಜೆ: ೫ ಘಂಟೆಗೆ ಕೈಲಾಸಮಂಟಪದಲ್ಲಿನ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ: ಹಾಗೂ ಉಚ್ಛಾಯಿ (ಲಘು ರಥೋತ್ಸವ) ಜರುಗಲಿದೆ.
೧೫/೦೧/೨೦೨೫ ಬುಧವಾರ ಸಂಜೆ: ೫.೦೦ ಘಂಟೆಗೆ ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವದ ಚಾಲನೆಗೊಳ್ಳಲಿದೆ ಸಂಜೆ: ೬.೦೦ ಘಂಟೆಗೆ ಕೈಲಾಸ ಮಂಟಪದಲ್ಲಿ ಧಾರ್ಮಿಕ ಗೋಷ್ಠಿ – ಅನುಭಾವಿಗಳ ಅಮೃತ ಚಿಂತನ ಗೋಷ್ಠಿಗಳು ಮೂರು ದಿನಗಳ ಕಾಲ ಜರುಗಲಿವೆ.
ದಿನಾಂಕ ೧೬.೦೧.೨೦೨೪ ರಂದು ಗುರುವಾರ ಸಂಜೆ: ೫:೦೦ ಘಂಟೆಗೆ ಶ್ರೀಮಠದ ಆವರಣದಲ್ಲಿ ಬಳಗಾನೂರ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜರುಗುವದು.
೧೭.೦೧.೨೦೨೪ ರಂದು ಶುಕ್ರವಾರ ೫:೦೦ ಘಂಟೆಗೆ, ಕೈಲಾಸ ಮಂಟಪದಲ್ಲಿನ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಜರುಗಲಿದೆ ಎಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.