ಮೇಣದ ಬತ್ತಿಯ ದೀಪದೊಂದಿಗೆಉಚಿತ ವಸತಿ ಹಾಗೂ ಪ್ರಸಾದ ನಿಲಯದ ಮಕ್ಕಳಿಂದ ಭಕ್ತರಿಗೆ ಜಾತ್ರೆಗೆ ಆಹ್ವಾನ

0

Get real time updates directly on you device, subscribe now.

ಅಜ್ಜನ ಜಾತ್ರಗೆ ಬನ್ನಿ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿಅರ್ಥ ಪೂರ್ಣವಾಗಿಜರುಗುತ್ತಿದೆ. ಆಧುನಿಕತೆಯ ಸ್ಪರ್ಶದಜೊತೆಗೆ ಭಕ್ತರಿಗೆ ೨೦೨೫ರ ಮಹಾಜಾತ್ರೋತ್ಸವದಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿತಲುಪಿಸುವ ಸತ್ಕಾರ್ಯದಲ್ಲಿತೊಡಗಿದೆ. ಅದಕ್ಕೆಈ ಬಾರಿಯೂಜನೇವರಿ ೧೫, ೧೬ ಹಾಗೂ ೧೭ರಂದು ನಡೆಯುವಅಜ್ಜನಜಾತ್ರೆಗೆಭಕ್ತರನ್ನುಆಹ್ವಾನಿಸುವ ಆ ದೃಶ್ಯವನ್ನುಡ್ರೋಣ್‌ಕ್ಯಾಮರಾದ ಮೂಲಕ ಸೆರೆಹಿಡಿದಫೋಟೊದೊಂದಿಗೆ ಅಜ್ಜನ ಜಾತ್ರಗೆ ಬನ್ನಿ ಎಂದು ಆಹ್ವಾನ ನೀಡಲಾಗಿದೆ. ಈ ಚಿತ್ರದ ವಿಶೇಷತೆಎಂದರೇಈ ಚಿತ್ರವು ಶ್ರೀ ಮಠದಉಚಿತ ವಸತಿ ಹಾಗೂ ಪ್ರಸಾದ ನಿಲಯಕಟ್ಟಡದ ಮುಂಭಾಗದ ವಿಶಾಲವಾದಆವರಣದಲ್ಲಿ ಸೆರೆ ಹಿಡಿಯಲಾಗಿದೆ.ಮುಸ್ಸಂಜೆಯ ಹೊತ್ತಿನಲ್ಲಿ ಸೆರೆ ಹಿಡಿದ ಈ ಚಿತ್ರವು ನೋಡಲುಅತ್ಯಂತ ಮನೋಹರವಾಗಿದೆ. ಮುಗ್ದ ಮನಸ್ಸಿನ ಶ್ರೀ ಮಠದಉಚಿತ ವಸತಿ ಹಾಗೂ ಪ್ರಸಾದ ನಿಲಯದ ಸುಮಾರು ೧೫೦೦ ಮಕ್ಕಳು ಮೇಣದಬತ್ತಿ ಹಿಡಿದು ಬೆಳಗುವದರ ಮೂಲಕ ಅಜ್ಜನಜಾತ್ರೆಗೆ ಬನ್ನಿಎಂದು ಭಕ್ತರಿಗೆಆಹ್ವಾನಿಸುವ ಸನ್ನಿವೇಶಅನನ್ಯವಾದುದು.ಇದು ಶ್ರೀ ಅಜ್ಜನಜಾತ್ರೆಗೆ ಬನ್ನಿ ಎನ್ನುವಕನ್ನಡವರ್ಣಮಾಲೆಅನುಸಾರವಾಗಿಎಲ್ಲಾ ಮಕ್ಕಳು ನಿಂತು ಮೇಣದ ಬತ್ತಿಹಿಡಿದ ಸನ್ನಿವೇಶವನ್ನು ಡ್ರೋಣ್‌ಕ್ಯಾಮೆರಾದಲ್ಲಿಚಿತ್ರ ಸೆರೆ ಹಿಡಿಯಲಾಗಿದೆ.ಇದು ಶ್ರೀಮಠದ ಭಕ್ತರಿಗೆಈ ವರ್ಷದಜಾತ್ರೆಗೆಸಾಂಪ್ರದಾಯಿಕಆಹ್ವಾನ ನೀಡಲಾಗಿದೆ .

Get real time updates directly on you device, subscribe now.

Leave A Reply

Your email address will not be published.

error: Content is protected !!