ಕೊಪ್ಪಳ ರೈಲು ನಿಲ್ದಾಣಕ್ಕೆ ಮಹಾಮಹಿಮ ’ಶ್ರೀ ಗವಿಸಿದ್ದೇಶ್ವರ’ ಹೆಸರಿಡಲು ಮನವಿ

0

Get real time updates directly on you device, subscribe now.

ಪ್ರಸ್ತಾಪ : ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಸಂಸದ ರಾಜಶೇಖರ ಹಿಟ್ನಾಳ

ಕೊಪ್ಪಳ, ೦೮: ಕೊಪ್ಪಳ ರೈಲು ನಿಲ್ದಾಣಕ್ಕೆ ಮಹಾಮಹಿಮ ’ಶ್ರೀ ಗವಿಸಿದ್ದೇಶ್ವರ ರೈಲು ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಕೊಪ್ಪಳ ನಗರದ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳು ಸಂಸದ ರಾಜಶೇಖರ ಹಿಟ್ನಾಳರಿಗೆ

ಸಲ್ಲಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ನೂರಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.

ವಾಣಿಜ್ಯೋದ್ಯಮಿ ಮತ್ತು ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಇದು ಶ್ರೀ ಗವಿಸಿದ್ಧೇಶ್ವರ ನೆಲ, ಇಲ್ಲಿನ ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರರು, ಕೊಪ್ಪಳದ ಹಲವು ಸಂಘ-ಸಂಸ್ಥೆಗಳು ಒಕ್ಕೊರಲಿನಿಂದ ಇಲ್ಲಿ ಬಂದಿದ್ದೇವೆ. ಮಹಾಮಹಿಮನಾದ ಶ್ರೀ ಗವಿಸಿದ್ಧೇಶ್ವರರ ಹೆಸರನ್ನು ಕೊಪ್ಪಳದ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು.

ಕವಿ, ಪತ್ರಕರ್ತೆ ಸಾವಿತ್ರಿ ಮುಜುಂದಾರ್ ಮಾತನಾಡಿ ಶ್ರೀ ಗವಿಸಿದ್ಧೇಶ್ವರ ಹೆಸರಿಡುವದರಲ್ಲಿ ತಪ್ಪೇನಿಲ್ಲ. ನಮ್ಮವರೇ ಆದ ನೀವು ಪ್ರಯತ್ನ ಮಾಡಬೇಕು ಎಂದು ಸಂಸದರಿಗೆ ಹೇಳಿದರು.

ವೆಂಕಟೇಶ ಶ್ಯಾನಭಾಗ್ ಮಾತನಾಡಿ ಶ್ರೀ ಗವಿಮಠ ದಾಸೋಹಕ್ಕೆ ಹೆಸರಾದುದು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಶ್ರೀ ಗವಿಮಠ ಸಲ್ಲಿಸುತ್ತಿದೆ. ಗವಿಸಿದ್ಧೇಶ್ವರರ ಹೆಸರನ್ನೇ ರೈಲು ನಿಲ್ದಾಣಕ್ಕೆ ಇಡಬೇಕು ಎಂದು ಆಗ್ರಹಿಸಿದರು.

ಮನವಿ ಪತ್ರಗಳನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ಸಂಸದ ರಾಜಶೇಖರ ಹಿಟ್ನಾಳ ಶ್ರೀ ಗವಿಮಠ ನಮ್ಮೆಲ್ಲರ ಹೆಮ್ಮೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ತಮ್ಮೆಲ್ಲರ ಮನದಿಂಗಿತ ತಿಳಿಸಿ, ಕೊಪ್ಪಳ ರೈಲು ನಿಲ್ದಾಣಕ್ಕೆ ಗವಿಸಿದ್ಧೇಶ್ವರ ಹೆಸರಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

ಆರಂಭದಲ್ಲಿ ವೀರೇಶ ಕೊಪ್ಪಳ ಸ್ವಾಗತಿಸಿದರೆ, ಕೊನೆಯಲ್ಲಿ ವರ್ತಕ ಸಿದ್ಧಣ್ಣ ನಾಲ್ವಾಡರು ವಂದಿಸಿದರು.

ಲಿಂಗಾಯತ ಪ್ರಗತಿಶೀಲ ಟ್ರಸ್ಟ್ ಕೊಪ್ಪಳ, ಕೊಪ್ಪಳ ವರ್ತಕರ ಸಂಘ, ಅಕ್ಕಮಹಾದೇವಿ ಮಹಿಳಾ ಮಂಡಳಿ, ಬಸವ ಸಮಿತಿ ಕೊಪ್ಪಳ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲೆ, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಕೊಪ್ಪಳ, ಪ್ರಗತಿ ಮಹಿಳಾ ವೇದಿಕೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಯುವ ಘಟಕ ಕೊಪ್ಪಳ, ಜಿಲ್ಲಾ ವಕೀಲರ ಸಂಘ ಕೊಪ್ಪಳ ಸೇರಿದಂತೆ ಹಲವು ಪ್ರಮುಖ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ವರ್ತಕರಾದ ಮಲ್ಲಿಕಾರ್ಜುನ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್ವರಪ್ಪ ಕೊಪ್ಪಳ, ನಗರಸಭೆ ಸದಸ್ಯರುಗಳಾದ ಗುರುರಾಜ ಹಲಗೇರಿ, ರಾಜಶೇಖರ ಆಡೂರ, ದಾನಪ್ಪ ಶೆಟ್ಟರ್, ಶರಣ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಶಿವಕುಮಾರ ಕುಕನೂರ, ಕದಳಿ ಮಹಿಳಾ ವೇದಿಕೆಯ ನಿರ್ಮಲಾ ಬಳ್ಳೊಳ್ಳಿ, ಜ್ಯೋತಿ ಕದ್ರಳ್ಳಿಮಠ, ಸಾವಿತ್ರಿ ಮುಜುಂದಾರ, ಅಪರ್ಣ ಬಳ್ಳೊಳ್ಳಿ, ಸುಜಾತಾ ಹಲಗೇರಿ, ಪ್ರತಿಭಾ ಅಗಡಿ, ಸುಧಾ ಶೆಟ್ಟರ್, ಹೇಮಾ ಬೊಮ್ಮನಾಳ, ಶಾರದಾ ಗಣವಾರಿ, ಪರಿಮಳ ಹತ್ತಿ, ಸುಮಾ ಹಿರೇಮಠ, ಸೌಮ್ಯಾ ನಾಲ್ವಾಡ, ಚಂದಾ ಅಗಡಿ, ಅನುಸೂಯಾ ಮಟ್ಟಿ, ವಿಜಯಾ ಕೊರ್ಲಹಳ್ಳಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!