ನಗರಸಭೆ ಗಂಗಾವತಿ: ಮಹಿಳಾ ಸ್ವ-ಸಹಾಯ ಸಂಘಗಗಳಿAದ ಅರ್ಜಿ ಆಹ್ವಾನ
ಗಂಗಾವತಿ ನಗರ ಸ್ಥಳೀಯ ಸಂಸ್ಥೆಯಲ್ಲಿನ ನೀರಿನ ಬಳಕೆಯ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹೀತವಾಗಿ ಮತ್ತು ಪುಸ್ತಕ ವಾಷೀಕ ಸಹೀತ ವಸೂಲಿ ಮಾಡುವುದು ಹಾಗೂ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ವಾರ್ಷಿಕ ಬೇಡಿಕೆಗೆ ಅನುಗುಣವಾಗಿ ಸಮರ್ಪಕವಾಗಿ ವಸೂಲಿ ಮಾಡಲು ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆದು ವಸೂಲಾದ ಮೊತ್ತದಲ್ಲಿ ಶೇ.5ರಷ್ಟನ್ನು ಪ್ರೋÃತ್ಸಾಹ ಧನವನ್ನು ಸ್ವ-ಸಹಾಯ ಗುಂಪುಗಳಿಗೆ ನೀಡಲಾಗುವುದು.
ಅರ್ಹತೆಗಳು: ಮಹಿಳಾ ಸ್ಚ-ಸಹಾಯ ಸಂಘವು ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಿರಬೇಕು. ಹಾಗೂ ಪಂಚಸೂತ್ರಗಳನ್ನು ಅನುಸರಿಸುತ್ತಿರಬೇಕು. ಸಂಘಗಳ ಸದಸ್ಯರು ಕನಿಷ್ಠ 7 ನೇ ತರಗತಿ ವರೆಗೆ ಶಿಕ್ಷಣ ಹಾಗೂ ಎಲೆಕ್ಟಾçನಿಕ್ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೋಂದಿರಬೇಕು. ಸ್ವ-ಸಹಾಯ ಸಂಘವು ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಬ್ಯಾಂಕಿನ ಮೂಲಕ ಅಥವಾ ಆಂತರಿಕಾ ಸಾಲ ಪಡೆದು ನಿಯಮಿತ ಸಾಲ ಮರುಪಾವತಿ ಮಾಡಿರಬೇಕು. ಸ್ವ-ಸಹಾಯ ಗುಂಪು ಸಂಬAಧಪಟ್ಟ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಡೇ-ನಲ್ಮ್ ಅಭಿಯಾನದಡಿ ನೋಂದಾಹಿಸಿಕೊAಡು ಮಾನ್ಯತೆ ಇರುವ ಎಂಐಎಸ್ ಕೋಡ್ ಹೊಂದಿರಬೇಕು. ಸ್ವ-ಸಹಾಯ ಗುಂಪು ರಚನೆಯಾಗಿ ಕನಿಷ್ಠ 3 ವರ್ಷ ಪೂರೈಸಿರಬೇಕು. ಸ್ವ- ಸಹಾಯ ಗುಂಪು ಮತ್ತು ಗುಂಪಿನ ಸದಸ್ಯರ ಯಾವುದೇ ಅಪರಾಧ ಅಥವಾ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹಿನ್ನೆಲೆಯನ್ನು ಹೊಂದಿರಬಾರದು. ನಗರ ಸ್ಥಳೀಯ ಸಂಸ್ಥೆಯಿAದ ನಿಗಧಿಪಡಿಸಲಾದ ಆಸ್ತಿ ತೆರಿಗೆ ಮತ್ತು ನೀರಿ ಶುಲ್ಕ ವಸೂಲಾತಿ ಗುರಿಗೆ ಕಾರ್ಯನಿರ್ವಹಿಸಲು ಆಸಕ್ತಿ ಮತ್ತು ಬದ್ದತೆಯನ್ನು ಹೊಂದಿರಬೇಕು.
ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳು ನಿಗದಿತ ಅರ್ಜಿ ನಮೂನೆಯನ್ನು ನಗರಸಭೆ ಕಾರ್ಯಾಲಯ ಗಂಗಾವತಿ ಇಲ್ಲಿ ಪಡೆದು ಭರ್ತಿ ಮಾಡಿ ಡಿಸೆಂಬರ್ 30 ರೊಳಗಾಗಿ ಈ ಕಚೇರಿಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು ನಗರಸಭೆ ಗಂಗಾವತಿ, ಡೇ-ನಲ್ಮ್ ವಿಭಾಗ ರವರನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.