ಡಿ. 11ರಂದು ಜಿಲ್ಲಾ ಮಟ್ಟದ ವಿಜ್ಞಾನ ಮೇಳ ಆಯೋಜನೆ
ಕೊಪ್ಪಳ ಕೊಪ್ಪಳ ಜಿಲ್ಲೆಯ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳಿಗಾಗಿ ಯುವಜನ ಸಬಲೀಕರಣ ಇಲಾಖೆ ಮತ್ತು ಕೊಪ್ಪಳ ನೆಹರು ಯುವ ಕೇಂದ್ರ ಹಾಗೂ ಶ್ರೀ ಗವಿಸಿದ್ದೇಶ್ವರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕೊಪ್ಪಳ ಇವರ ಸಹಯೋಗದಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಡಿಸೆಂಬರ್ 11 ರಂದು ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ಜೈವಿಕತಂತ್ರಜ್ಞಾನ (Biotechnology), ರೊಬೊಟಿಕ್ಸ್ (Robotics), ಕೃತಕ ಬುದ್ಧಿಮತ್ತೆ (Artificial Intelligence), ನವೀಕರಿಸಬಹುದಾದ ಶಕ್ತಿ (Renewable Energy), ಪರಿಸರ ಸಂರಕ್ಷಣೆ (Environmental Conversation), ಆರೋಗ್ಯ ತಂತ್ರಜ್ಞಾನ (Healthcare Tech), ಡಿಜಿಟಲ್ ಪರಿಹಾರ (Digital Solutions) ವಿಷಯಗಳ ಕುರಿತು ವಸ್ತು ಪ್ರದರ್ಶನದ ಸ್ಪರ್ಧೆ ಜರುಗಲಿವೆ. ವಿಜೇತ ಶಿಬಿರಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು.
ಆಸಕ್ತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಾ.ಮಂಜುನಾಥ ಎಂ ಮೊ.ಸಂ: 9945070301, ಮೊಂಟು ಪತರ್ ಮೊ.ಸಂ: 9049487027, ಇವರನ್ನು ಅಥವಾ ದೂ.ಸಂ: 08539-230116 ಮತ್ತು 8277075830 ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.