ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಆಯ್ಕೆ
: ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 10 ರಿಂದ 14ರವರೆಗೆ ಉತ್ತರ ಪ್ರದೇಶ ರಾಜ್ಯದ ವಾರಣಾಸಿಯಲ್ಲಿ ಜರುಗುವ 14ವರ್ಷ ವಯೋಮಿತಿ ಒಳಗಿನ ಬಾಲಕಿಯರ 68ನೇ ರಾಷ್ಟ್ರೀಯ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾವಳಿಗೆ ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ನಿಲಯದ ಬಾಲಕಿಯರಾದ ಕಾವೇರಿ ತಂದೆ ನಾಗಪ್ಪ, ಭೂಮಿಕಾ ತಂದೆ ರಾಮಣ್ಣ, ದುರುಗಮ್ಮ ತಂದೆ ಮರಿಸ್ವಾಮಿ, ಶಾರದಾ ತಂದೆ ಮಹಾಂತೇಶ ಹಾಗೂ ಅನಿತಾ ತಂದೆ ಹನುಮಪ್ಪ, ಎಂಬ ವಿದ್ಯಾರ್ಥಿನಿಯರು ಆಯ್ಕೆಯಾಗಿರುತ್ತಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ್ ಬಿ ಜಾಬಗೌಡರ್ ಅವರು ಈ ಎಲ್ಲಾ ಬಾಲಕಿಯರಿಗೆ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಉತ್ತಮವಾಗಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಇಲಾಖೆ ಅಧೀಕ್ಷಕ ನಾಗರಾಜ್ ಹೆಚ್., ವಿಷಯ ನಿರ್ವಾಹಕ ಬಿ.ಕೀರ್ತಿವರ್ಧನ, ವಾಲಿಬಾಲ್ ತರಬೇತುದಾರರಾದ ಸುರೇಶ, ಕಮಲ್ ಸಿಂಗ್ ಬಿಸ್ಟ್, ದೀಪಾ ಮತ್ತು ಅಥ್ಲೆಟಿಕ್ಸ್ ತರಬೇತುದಾರ ವಿಶ್ವನಾಥ ಕರ್ಲಿ, ಸಿಬ್ಬಂದಿ ಹನುಮೇಶ ಪೂಜಾರ, ತುಕಾರಂ ರಂಜಪಲ್ಲಿ ಹಾಗೂ ಮತ್ತಿತರರಿದ್ದರು.
Comments are closed.