ಜನಮನ ಗೆದ್ದ ಯಕ್ಷಗಾನ ಪ್ರದರ್ಶನ

Get real time updates directly on you device, subscribe now.

ಕೊಪ್ಪಳ : ಕರಾವಳಿ ಬಳಗ ಕೊಪ್ಪಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಮತ್ತು ಕಲರವ ಶಿಕ್ಷಕರ ಸೇವಾ ಬಳಗದ ಸಹಯೋಗದಲ್ಲಿ ಸಾಹಿತ್ಯ ಭವನದಲ್ಲಿ ಇತ್ತೀಚಿಗೆ ನಡೂರು ಮಂದರ್ತಿಯ ಮಹಾಗಣಪತಿ ಯಕ್ಷ ಮಂಡಳಿ ವತಿಯಿಂದ ನಡೆದ ಯಕ್ಷಗಾನ ಪ್ರದರ್ಶನ ನಡೆಯಿತು. ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮ ಉದ್ಘಾಟಿಸಿದರು.  ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ  ಮಾತನಾಡಿದರು

ಕಲಾವಿದರ   ಅಭಿನಯ ಸಮಸ್ತರ ಮನಸೂರೆಗೊಂಡಿತು. ಕಾಂತಾರ ಚಲನಚಿತ್ರವನ್ನು ನೆನಪಿಸುವ ಹಲವು  ದೃಶ್ಯಗಳು, ಪಂಜುರ್ಲಿಯ ಪ್ರವೇಶ ಕಲಾಪ್ರೇಮಿಗಳ ಕಣ್ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಶಶಿಕರ ಶೆಟ್ಟಿ, ಜೀವನ ಶೆಟ್ಟಿ,    ನಗರಸಭಾ ಸದಸ್ಯ ಅರುಣಶೆಟ್ಟಿ,  ಮಾಜಿ ಅಧ್ಯಕ್ಷರಾದ ಸಂಜೀವ ಶೆಟ್ಟಿ ಮತ್ತು ವಾಸು, ಮಂದರ್ತಿ ಮೇಳದ ಭಾಗವತರಾದ ಸದಾಶಿವ ಅಮೀನ,   ಕಲರವ ಬಳಗದ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಪೂಜಾರ,   ಉದ್ಯಮಿಗಳಾದ ಶಶಿಧರ ಶೆಟ್ಟಿ, ವಿಜಯ ಶೆಟ್ಟಿ, ಜೀವನ ಶೆಟ್ಟಿ, ಸಂಜೀವ ರಾವ್, ಸಂತೋಷ ಶೆಟ್ಟಿ ಸೇರಿದಂತೆ  ನಗರದ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: