ಗಂಧದ ಮರಗಳ್ಳರ ಬಂಧನ : 13.3 ಲಕ್ಷ ಮೌಲ್ಯದ ವಸ್ತುಗಳು ವಶ
ಕೊಪ್ಪಳ : ಗಂಧದ ಮರ ಕಡಿದು ತುಂಡನ್ನು ಸಾಗಿಸಿದ್ದ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಭೇದಿಸಿ ಯಲಬುರ್ಗಾ ಹಾಗೂ ಕುಕನೂರ್ ಪೊಲೀಸರು ಆರು ಕಳ್ಳರನ್ನು ಬಂಧಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ ರಾಮ್ ಎಲ್ ಅರಸಿದ್ದಿ ಈ ಪ್ರಕರಣದಲ್ಲಿ 6 ಕಳ್ಳರನ್ನು ಬಂಧಿಸಿ ಜೊತೆಗೆ ಅವರಿಂದ ೪. 70 ಲಕ್ಷ ನಗದು ಹಣ ಹಾಗೂ 3.10 ಲಕ್ಷ ಮೌಲ್ಯದ ಟ್ರಾಲಿ ಶ್ರೀಗಂಧದ ವಸ್ತು ಎತ್ತುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 5.50 ಲಕ್ಷ ಮೌಲ್ಯದ ಎರಡು ವಾಹನಗಳನ್ನು ಒಟ್ಟು 13. 30 ಲಕ್ಷ ಮೌಲ್ಯದ ನಗದು ಹಣ ಆಗುವ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಹೇಳಿದರು. ಕೊಪ್ಪಳ ಜಿಲ್ಲೆ ಯಲಬುರ್ಗಾ ವೃತ್ತ ವ್ಯಾಪ್ತಿಯ ಕುಕನೂರು ಪಟ್ಟಣ, ಶಿರೂರು ಸೀಮಾ ಹಾಗೂ ಕೊನೆಸಾಗರ ಸಿಮಾದಲ್ಲಿ ಜರುಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಎಎಸ್ಪಿ ಹೇಮಂತಕುಮಾರ್, DSP ಮುತ್ತಣ್ಣ ಸರವಗೊಳ ಇವರ ಮಾರ್ಗದರ್ಶನದಲ್ಲಿ ಸಿಪಿಐ ಮೌನೇಶ್ವರ ಪಾಟೀಲರ ನೇತೃತ್ವದಲ್ಲಿ ತನಿಖಾ ಅಧಿಕಾರಿ ಗುರುರಾಜ್ ಟಿ ಇವರ ತಂಡ ಈ ಕಳ್ಳತನಗಳ ಪ್ರಕರಣವನ್ನು ಭೇದಿಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಹೆಮಂತಕುಮಾರ್ , ಸಿಪಿಐ ಮೌನೇಶ್ವರ್ ಮಾಲಿಪಾಟೀಲ್, ಪಿಎಸ್ಐಗಳಾದ ಗುರುರಾಜ್ ಟಿ, ವಿಜಯ ಪ್ರತಾಪ್, ಗುಲಾಮ್ ಅಹ್ಮದ, ಪ್ರಶಾಂತ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು
ಪ್ರಕರಣದ ಪತ್ತೆ ಕುರಿತು ಹೇಮಂತಕುಮಾರ ಹೆಚ್ಚುವರಿ ಎಸ್.ಪಿ ಕೊಪ್ಪಳ ಮತ್ತು ಮುತ್ತಣ್ಣ ಸರವಗೋಳ, ಡಿಎಸ್‌ಪಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಮೌನೇಶ್ವರ ಮಾಲಿಪಾಟೀಲ ರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿಗಳಾದ ಗುರುರಾಜ ಟಿ. ಪಿ.ಎಸ್.ಐ ಕುಕನೂರು ಠಾಣೆ, ವಿಜಯ ಪ್ರತಾಪ್, ಪಿ.ಎಸ್.ಐ ಯಲಬುರ್ಗಾ ಠಾಣೆ, ಹಾಗೂ ಗುಲಾಂ ಅಹ್ಮದ್ ಪಿ.ಎಸ್.ಐ (ತನಿಖೆ) ನೇತೃತ್ವದಲ್ಲಿ ಯಲಬುರ್ಗಾ ಠಾಣೆ, ಪ್ರಶಾಂತ ಪಿ.ಎಸ್.ಐ ಬೇವೂರು ಠಾಣೆ ಹಾಗೂ ಸಿಬ್ಬಂದಿಗಳಾದ ಯಲಬುರ್ಗಾ ಠಾಣೆಯ ಹೆಚ್.ಸಿ-53 ದೇವೇಂದ್ರಪ್ಪ, ಸಿ.ಹೆಚ್.ಸಿ-38 ಛತ್ರಪ್ಪ, ಪಿಸಿ- 372 ವಿನೋದ, ಪಿಸಿ-497 ಸದ್ದಾಂ ಹುಸೇನ, ಸಿಪಿಸಿ-513 ಗುರುರಾಜ, ಕುಕನೂರು ಠಾಣೆಯ ಎ.ಎಸ್.ಐ ಶರಣಪ್ಪ, ಹೆಚ್.ಸಿ-81 ಮೆಹೆಬೂಬ, ಹೆಚ್.ಸಿ-26 ಸರ್ವಶ, ಹೆಚ.ಸಿ-74 ವೆಂಕಟೇಶ, ಹೆಚ್.ಸಿ-182 ಬಸಯ್ಯ, ಪಿಸಿ-312 ಮಾರುತಿ, ಸಿಪಿಸಿ-137 ಮಂಜುನಾಥ, ಪಿಸಿ-384 ಹನುಮಪ್ಪ, ಸಿಪಿಸಿ-133 ರವಿಶಂಕರ, ಸಿಪಿಸಿ-457 ವಿಶ್ವನಾಥ, ಸಿಪಿಸಿ-94 ಶಿವಾನಂದ, ಬೇವೂರು ಪೊಲೀಸ್ ಠಾಣೆಯ ಹೆಚ್.ಸಿ-72 ಬಸವರಾಜ, ಹೆಚ್.ಸಿ-161 ಹನುಮಪ್ಪ, ಪಿಸಿ-262 ವೀರಬಸಪ್ಪ, ಪಿಸಿ-496 ಪ್ರಕಾಶ, ಯಲಬುರ್ಗಾ ವೃತ್ತ ಕಛೇರಿಯ ಸಿಹೆಚ್‌ಸಿ-97 ಹೆಚ್.ಎಸ್ ತಹಶೀಲ್ದಾರ, ಹೆಚ್‌ಸಿ-247 ಮಹಾಂತೇಶ, ಸಿಪಿಸಿ 172 ಬಕ್ಷೀದಸಾಬ, ಸಿಪಿಸಿ-392 ಮಹಾಂತಗೌಡ, ಸಿಪಿಸಿ-390 ರಿಯಾಜ್ ಡಿಪಿಓ ತಾಂತ್ರಿಕ ವಿಭಾಗದ ಎ.ಪಿ.ಸಿ-166 ಪ್ರಸಾದ, ಎಪಿಸಿ-87 ಮಂಜುನಾಥ, ಎಹೆಚ್‌ಸಿ ಆಶ್ರಫ್, ಎಪಿಸಿ-208 ಬಸಯ್ಯ ಎ.ಪಿ.ಸಿ-25 ಶರಣಪ್ಪ ರವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
Comments are closed.