ಆಹಾರವೇ ಅದ್ಭುತ ಔಷಧಿ, ಅಡುಗೆಮನೆಯೇ ಔಷಧಾಲಯ – ಹನುಮಂತ ಮಳಲಿ

Get real time updates directly on you device, subscribe now.

ಕೊಪ್ಪಳ:

ನಗರದ ಪಾನಘಂಟಿ ಕಲ್ಯಾಣ ಮಂಟಪ ಸಭಾ ಭವನದಲ್ಲಿ ವಾಸವಿ ಕ್ಲಬ್ ,ಪಾನಘಂಟಿ ಪೌಂಡೇಷನ್ ,ಹಿಂದೂ ಸೇವಾ ಪ್ರತಿಷ್ಠಾನ ಭಾಗ್ಯನಗರ-ಕೊಪ್ಪಳ ಇವರುಗಳ ಸಹಯೋಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಮಾಹಿತಿ ಮತ್ತು ಮನೆಮದ್ದು ಸಲಹಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹಾಗೂ ಗಣ್ಯರು ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿ ನಮ್ಮ ಆರೋಗ್ಯದ ಗುಟ್ಟು ನಮ್ಮ ಕೈಲಿದೆ.ಹಿತಮಿತ ಆಹಾರ ಸೇವನೆ ಹಾಗೂ ನಿತ್ಯ ಯೋಗದಿಂದ ರೋಗ ಮುಕ್ತರಾಗೋಣ.ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಶ್ರಮಿಸೋಣ ಎಂದು ಹೇಮಲತಾ ನಾಯಕ ತಿಳಿಸಿದರು.

ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಪಾರಂಪರಿಕ ವೈದ್ಯರಾದ ಡಾ.ಹನುಮಂತಪ್ಪ ಮಳಲಿ ಮಾತನಾಡಿ ನಾವೆಲ್ಲಾ ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರುಹೋಗಿ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದೇವೆ.ನಮ್ಮ ಆರೋಗ್ಯದ ಗುಟ್ಟು ನಮ್ಮ ಅಡುಗೆ ಮನೆಯಲ್ಲಿಯೇ ಇದೆ.ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಮನೆಮದ್ದು ಔಷಧಗಳಿಂದಲೆ ಗುಣಪಡಿಸಿಕೊಳ್ಳಬಹುದು.ಯೋಗ,ಧ್ಯಾನ,ಸಮಯಕ್ಕೆ ಸರಿಯಾದ ಊಟದ ಕ್ರಮದಿಂದ ಹಣ ಮತ್ತು ಆರೋಗ್ಯವನ್ನು ಉಳಿಸಬಹುದು.ನಮ್ಮ ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಂಸ್ಕೃತಿ ಸಂಪ್ರದಾಯದ ಉಳಿವಿಗಾಗಿ ನಾವೆಲ್ಲರೂ ಬದ್ದರಾಗೋಣ ಸ್ವದೇಶಿ ವಸ್ತುಗಳ ಬಳಕೆಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ ಎಂದು ಸುದೀರ್ಘವಾದ ಆರೋಗ್ಯ ಸಲಹೆ ಮತ್ತು ಮನೆಮದ್ದು ತಯಾರಿಕೆಯ ಕ್ರಮದ ಬಗ್ಗೆ ತಿಳಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯರಾದ ಡಾ.ಪ್ರಭು ನಾಗಲಾಪುರ ಮಾತನಾಡಿ ಆರೋಗ್ಯ ಸಲಹೆ ನೀಡಿದರು.

ಸಮಾಜ ಸೇವಕರು ವಾಸವಿ ಕ್ಲಬ್ ಅಧ್ಯಕ್ಷರಾದ ಶಾರದಾ ಪಾನಘಂಟಿ ಮಾತನಾಡಿ ನಾವೆಲ್ಲರೂ ವೈದ್ಯರ ಸಲಹೆಯನ್ನು ಪಡೆದು ಆರೋಗ್ಯ ಕ್ರಮವನ್ನು ತಯಾರಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ತಿಳಿಸಿದರು.

ಕ್ಯಾನ್ಸರ್ ರೋಗ ಹಾಗೂ ಇತರೆ ರೋಗಗಳಿಗೆ ಮನೆಮದ್ದು ಕುರಿತಾದ ಮಾಹಿತಿ ನೀಡಿ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಬೀಮರಾವ್ ದೇಶಪಾಂಡೆ,ಗಿರೀಶ್ ಪಾನಘಂಟಿ,ರೇಣುಕಾ ಹುರುಳಿ ಹಾಗೂ ವಿವಿಧ ಜಿಲ್ಲೆಯ ಶಿಬಿರಾರ್ಥಿಗಳು,ಸೇವಾರ್ಥಿಗಳು ಉಪಸ್ಥಿತಿ ಇದ್ದರು.ಲಕ್ಷ್ಮೀ ಪಾನಘಂಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!