ಪ್ರಾದೇಶಿಕ ರಸ್ತೆಯ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಚಾರ ಖಂಡಿಸಿ ಬೃಹತ್ ಪ್ರತಿಭಟನೆ
ಕೊಪ್ಪಳ: ಪ್ರಾದೇಶಿಕ ರಸ್ತೆಯ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಚಾರ ನಡೆಯುತ್ತಿದ್ದು ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೆ ಇರುವ ಕಾರಣ ಮತ್ತೊಮ್ಮೆ ಕ್ರಮಕ್ಕಾಗಿ ಜಿಲ್ಲಾ ಪ್ರಾದೇಶಿಕ ಕಛೇರಿಯ ಮುಂದೆ ಪ್ರತಿಭಟನೆ ಹಾಗೂ ಧರಣಿ ಹಮ್ಮಿಕೊಳ್ಳ ಬೇಕಾಯಿತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಜಿಲ್ಲಾಧ್ಯಕ್ಷ ವಸವರಡ್ಡಿ ಶಿವನಗೌಡ್ರ ಹೇಳಿದರು.
ಅವರು ಕರವೇ ಜನಸೇನೆ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘ ಜಂಟಿ ಸಹಯೋಗದಲ್ಲಿ ಪ್ರಾದೇಶಿಕ ಕಛೇರಿಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಹಾಗೂ ಧರಣಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳ ನೊಂದಣೆ, ವರ್ಗಾವಣೆ ಮತ್ತು ಇತರ ಎಲ್ಲಾ ವಾಹನಗಳ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಪ್ರತಿ ನಿತ್ಯ ಸಾರಿಗೆ ಕಛೇರಿಗೆ ಬರುತ್ತಿದ್ದು, ಅಧಿಕಾರಿಗಳು ಸರ್ಕಾರದ ಶುಲ್ಕವನ್ನು ಹೊರತು ಪಡಿಸಿ ತಮಗೆ ಮನಬಂದಂತೆ ವಾಹನ ಮಾಲೀಕರಲ್ಲಿ ಅಧಿಕಾರಿಗಳು ಕಛೇರಿಯಲ್ಲಿ ತಮ್ಮ ಅನಧಿಕೃತವಾಗಿ ಕೆಲಸಗಾರರನ್ನು ಇಟ್ಟುಕೊಂಡು ವಾಹನ ಮಾಲೀಕರಿಂದ ಮತ್ತು ಹಳ್ಳಿಗಳಿಂದ ಬರುವ ಯುವಕರಲ್ಲಿ ಚಾಲನೆ ಪರವಾಗಿ ನೀಡುವ ನೆಪದಲ್ಲಿ ಸಾವಿರಾರುಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಈ ಹಿಂದೆ ದಿ.ಜುಲೈ ೦೪.೨೦೨೩ ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಖುದ್ದಾಗಿ ಒಂದು ಮನವಿಯನ್ನು ಸಲ್ಲಿಸಲಾಗಿತ್ತು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ನಂತರ ಮಾತನಾಡಿ ಕೊಪ್ಪಳ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರಾದ ಹುಸೇನ್ ರಾಜಸಾಬ್ ಸೂಂಡೂರು ಮಾತಾನಾಡಿ ಹೊಸ ಲಾರಿಗಳ ನೊಂದಣಿ ಕೊಪ್ಪಳದಲ್ಲಿ ಮಾಡಲಾಗುತ್ತಿಲ್ಲ ಪಕ್ಕದ ವಿಜಯನಗರ ಜಿಲ್ಲೆಯ ಹೋಸಪೇಟೆಯಲ್ಲಿ ಹೊಸ ನೊಂದಣಿ ಮಾಡುತ್ತಿದ್ದಾರೆ ಇಲ್ಲಿ ಏಕೆ ಇಲ್ಲ ಎಂದು ಪ್ರಶ್ನೀಸಿದರು. ಇದರ ಬಗ್ಗೆ ಯಾವುದೇ ವಿಚಾರಣೆ ಮಾಡಿದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗುವುದೆಂದು ಬೇದರಿಕೆಯನ್ನು ಹಾಕುತ್ತಿದ್ದಾರೆ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಅವರನ್ನು ಈ ಕೂಡಲೇ ವರ್ಗಾವಣೆ ಮಾಡಿ ಸಾರ್ವಜನಿಕರ ಹಿತದೃಷ್ಟಿಯನ್ನು ಕಾಪಾಡಬೇಕೆಂದು, ಇವಲ್ಲಿವರೆಗೆ ಯಾವುದೇ ರೀತಿಯ ಕ್ರಮ ಜರುಗಿಸದೆ ಇರುವುದರಿಂದ ಧರಣಿಯನ್ನು ಹಮ್ಮಿಕೊಂಡಿದ್ದು ಇನ್ನೂ ಮುಂದೆ ಕೂಡಾ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾವುದು ಎಂದು ಹೇಳಿದರು. ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಹಮ್ಮದ್ ರಫೀಕ್ ಸಾಗರ್ ಟ್ರಾನ್ಸ್ ಪೋರ್ಟ್,ಲಾರಿ ಮಾಲೀಕರಾದ ಮೌಲಸಾಬ್ ಅಳವಂಡಿ, ಮಹಮ್ಮದ್ ಗೌಸ್ ಎಂಜಿಎಂ, ವಿನಯ ಕುಮಾರ್, ನಾಗಲಿಂಗ, ಸುಬ್ರಮಣ್ಯ ಗಂಗಾವತಿ ಲಾರಿ ಮಾಲೀಕರ ಸಂಘದ ಅಧ್ಯಕ್ಷರು, ಬಸಪುರ ಗೌಡ್ರು ಕೊಪ್ಪಳದ ಲಾರಿ ಮಾಲೀಕರ ಸಂಘದ ಖಾಜಾಂಚಿ ಚಾಂದ್ ಬಾಷ ಎಮ್‌ಜಿಎಮ್ ಮತ್ತು ಕೊಪ್ಪಳದ ಲಾರಿ ಮಾಲೀಕರು ಹಾಗೂ ಇನ್ನು ಮುಂತಾದವರು ಭಾಗವಹಿದ್ದರು.
Comments are closed.