ಕೇಂದ್ರೀಯ ವಿದ್ಯಾಲಯದಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆ

Get real time updates directly on you device, subscribe now.

ವಿದ್ಯಾರ್ಥಿಗಳಿಂದ ಹಿರಿಯ ಜೀವಿಗಳಿಗೆ ಗೌರವ
ಗಂಗಾವತಿ.
ನಗರದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆ ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಿ, ಅವರನ್ನು ಅತ್ಯಂತ ಪ್ರೀತಿಯಿಂದ ಕಾಣಬೇಕೆಂದು ನೃತ್ಯದ ಮೂಲಕ ಸಂದೇಶ ಸಾರಿದರು.
ಶನಿವಾರ ಆನೆಗೊಂದಿ ರಸ್ತೆಯ ಮಿನಿ ವಿಧಾನಸೌಧ ಹಿಂದೆ ಇರುವ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ ವಿದ್ಯಾರ್ಥಿಗಳ ಅಜ್ಜ-ಅಜ್ಜಿಯರು ಮತ್ತು ಹಿರಿಯ ಪಾಲಕರು ಆಗಮಿಸಿ ಮೆರಗು ನೀಡಿದರು. ವಿದ್ಯಾರ್ಥಿಗಳು ಎಲ್ಲಾ ಹಿರಿಯನ್ನು ಸ್ವಾಗತಿಸಿ ಆದರ, ಆತಿಥ್ಯ ನೀಡಿದರು. ವಿದ್ಯಾರ್ಥಿಗಳಿಂದ ಹಿರಿಯನ್ನು ಗೌರವಿಸುವ ಕುರಿತು ವಿಶೇಷ ನೃತ್ಯ, ನಾಟಕನ ಮತ್ತಿತರ ಪ್ರದರ್ಶನ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟನೆ ನಂತರ ಪ್ರಾಚಾರ್ಯ ಉಮೇಶ ಪ್ರಜಾಪತಿ ಮಾತನಾಡಿ, ಕೇಂದ್ರೀಯ ವಿದ್ಯಾಲಯದಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಆಟ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ಚಿತ್ರಕಲೆ, ವಿಜ್ಞಾನ ಪ್ರದರ್ಶನ ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತರಬೇತಿ ನೀಡಲಾಗುತ್ತದೆ. ಮತ್ತು ಗುರು, ಹಿರಿಯರಿಗೆ, ಪಾಲಕರಿಗೆ ಗೌರವಿಸಿ ಅವರನ್ನು ಆತ್ಮೀಯತೆಯಿಂದ ಕಾಣುವಂತೆ ನಿರಂತರ ಮಾರ್ಗದರ್ಶನ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಪ್ರತಿವರ್ಷ ಗ್ಯ್ರಾಂಡ್ ಫಾದರ್ ಡೇ ಪ್ರತ್ಯೇಕವಾಗಿ ಆಯೋಜಿಸಲಾಗುತ್ತದೆ. ವಿಶೇಷವಾಗಿ ಈ ವರ್ಷ ನಮ್ಮ ಶಾಲೆಯ ವಿದ್ಯಾರ್ಥಿಗಳು ಕಲಾ ಉತ್ಸವದಲ್ಲಿ ರಾಜ್ಯಮಟ್ಟದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮತ್ತು ವಿದ್ಯಾರ್ಥಿಗಳಿಗೆ ಕೌಶಲ್ಯದ ಜ್ಞಾನ ನೀಡಲು ಐದು ದಿನ ಮೇಕಪ್, ಮೋಬೈಲ್ ದುರಸ್ತಿ, ಉಲನ್ ಉಡುಪು ತಯಾರಿಕೆ, ಎಲೆಕ್ಟ್ರಿಷಿಯನ್ ತರಬೇತಿ ನೀಡಲಾಗಿದೆ. ನಮ್ಮ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ನಿರಂತರ ಪರಿಶೀಲಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪಾಲಕರು ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು ಎಂದು ಕೊರಿದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಜೈನ್ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಸತೀಶ, ರೋಟರಿ ಸಂಸ್ಥೆ ಅಧ್ಯಕ್ಷ ಟಿ.ಆಂಜನೇಯ, ಕೃಷಿ ಕಾಲೇಜಿನ ಪ್ರಾಧ್ಯಾಪಕ ಬಿ.ಶ್ರೀಕಾಂತ ಆಗಮಿಸಿದ್ದರು. ವಿದ್ಯಾರ್ಥಿಗಳ ಹಿರಿಯ ಪಾಲಕರು, ಅಜ್ಜ. ಅಜ್ಜಿಯರು ಪಾಲ್ಗೊಂಡಿದ್ದರು. ಶಾಲೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ವಿವಿಧ ತರಗತಿಯ ವಿದ್ಯಾರ್ಥಿಗಳಿಂದ ವಿಜ್ಞಾನ, ಗಣಿತ ವಸ್ತು ಪ್ರದರ್ಶನ, ನಾಟಕ, ನೃತ್ಯ ಮತ್ತಿತರ ಚಟುವಟಿಕೆಗಳು ನಡೆದವು. ಅಜ್ಜ, ಅಜ್ಜಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!