ಸೃಜನಾತ್ಮಕ ಸಿನೆಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮಟ್ಟಕ್ಕೆ ಪುಟ್ಟಣ್ಣ ಕಣಗಲ್ ಒಯ್ದಿದ್ದರು:ಕೆ.ನಿಂಗಜ್ಜ
*ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಪುಟ್ಟಣ್ಣ ಕಣಗಲ್ ಜನ್ಮದಿನಾಚರಣೆ
ಗಂಗಾವತಿ: ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ದೊರೆಯಲು ಮೇರು ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರು ಸಹ ಕಾರಣರಾಗಿದ್ದಾರೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಹೇಳಿದರು ಅವರು ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿರುವ ಪರಶುರಾಮ ದೇವರ ಮನೆ ಕರೋಕೆ ಸ್ಟುಡಿಯೋದಲ್ಲಿ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮ ದಿನಾಚರಣೆಯ ನಿಮಿತ್ಯ ಕೇಕ್ ಕತ್ತರಿಸಿ ಮಾತನಾಡಿದರು ನಿರ್ದೇಶಿಸಿದ ಕೆಲವೇ ಕೆಲವು ಚಿತ್ರಗಳು ಕನ್ನಡ ನಾಡಿನ ನೆಲದ ಸತ್ವವನ್ನು ರಂಗಭೂಮಿಯ ಮಹತ್ವವನ್ನು ಸೃಜನಶೀಲತೆಯನ್ನು ಎತ್ತಿ ಹಿಡಿದಿವೆ. ಪುಟ್ಟಣ್ಣ ಕಣಗಲ್ ಅವರು ಅದ್ಭುತವಾದಂತಹ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು. ಆದ್ದರಿಂದ ಕನ್ನಡ ಭಾಷೆ ಸಾಹಿತ್ಯ ಮತ್ತು ಚಿತ್ರರಂಗ ಪುಟ್ಟಣ್ಣ ಕಣಗಾಲವನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದರು.
ಸಿನಿಮಾ ಸಂಗೀತದ ಹಿರಿಯ ವಾದ್ಯಗಾರ ವಾದ್ಯಗಾರ ಎಸ್.ಜೆ. ಜಗನ್ನಾಥ ಮಾತನಾಡಿ ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗದ ಮೂಲಕ ನಿರ್ದೇಶಕರ ಪಾತ್ರ ಏನು ಎಂಬುದನ್ನು ತೋರಿಸಿದರು ಬೆಂಗಳೂರು ಅಲ್ಲದೆ ಇತರ ಕಡೆಯಲ್ಲಿ ಚಿತ್ರ ಗಳನ್ನು ಚಿತ್ರಿಕರಿಸುವ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಎಲ್ಲಾ ಜನರಿಗೂ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರಶುರಾಮ ದೇವರಮನೆ,ವಿಜಯಕುಮಾರ,ಹನುಮಂತಪ್ಪ ಹುಲಿಹೈದರ್,ತಿಪ್ಪೇಸ್ವಾಮಿ ಹೊಸಮಠ,ವಿರೇಶ ಸ್ವಾಮಿ,ವೆಂಕಟೇಶ ಧೂಳು,ವಿರೇಶ ಪಪ್ಪಿ,ಸತ್ಯನಾರಾಯಣ, ಎಸ್
ಎಂ.ಪಟೇಲ್,ಯಲ್ಲಪ್ಪ ಪೋಲ್ ಕಲ್,ಛತ್ರಪ್ಪ ತಂಬೂರಿ,ಲಲಿತಮ್ಮ,ವಿಜಯಲಕ್ಷ್ಮಿ,ಅಂಬಿಕಾ,ಮಾರುತಿ,ಹಾಜಿ.ಕೃಷ್ಣ ಕಬ್ಬೇರ್,ಗಿರಿಜಮ್ಮ, ಕುರುಗೋಡು ವೆಂಕಟೇಶ, ಮಂಜುನಾಥ ಗೋಡಿನಾಳ,ದುರುಗೇಶ ಸಾಣಾಪೂರ ಸೇರಿ ಅನೇಕರಿದ್ದರು.
Comments are closed.