ನಮ್ಮ ಅಡುಗೆ ನಮ್ಮ ಜವಾಬ್ದಾರಿ : ಶಿವಕುಮಾರ
ಕೊಪ್ಪಳ : “ಹಮಾರಿ ರಸೋಯಿ ಹಮಾರಿ ಜಿಮ್ಮೆದಾರಿ” “ನಮ್ಮ ಆಡುಗೆ ನಮ್ಮ ಜವಾಬ್ದಾರಿ” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡದ ಬಿಪಿಸಿಎಲ್ ಸೇಲ್ಸ್ ಮ್ಯಾನೇಜರ್ ಶಿವಕುಮಾರ್ ಹೇಳಿದರು.
ಅವರು ನಗರದ ಹೊಸಪೇಟೆ ರಸ್ತೆಯ ಗುರುಪ್ರಸಾದ್ ಭಾರತ್ ಗ್ಯಾಸ್ ಕಚೇರಿ ಆವರಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಎಲ್ ಪಿ ಜಿ ಗ್ಯಾಸ್ ಬಳಕೆಯ ಸುರಕ್ಷಿತ ಕ್ರಮಗಳನ್ನು ಕುರಿತು ಸಾರ್ವಜನಿಕರಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸಿ, ತೈಲ ಮಾರುಕಟ್ಟೆ ಕಂಪನಿಗಳಿಂದ, ಪಾಕಶಾಲೆಯ ಕೌಶಲ್ಯಗಳನ್ನು ಆಚರಿಸುವಾಗ ಎಲ್ಪಿಜಿ ನಿರ್ವಹಣೆ ಮತ್ತು ಅಡುಗೆಯಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದರು.
ಸ್ಪರ್ಧೆಯು ಉತ್ಸಾಹಭರಿತ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು, ಭಾಗವಹಿಸುವವರು ಸುರಕ್ಷಿತ ಎಲ್ಪಿಜಿ ನಿರ್ವಹಣಾ ಅಭ್ಯಾಸಗಳಿಗೆ ಬದ್ಧರಾಗಿ ತಮ್ಮ ಅಡುಗೆ ಪ್ರತಿಭೆಯನ್ನು ಪ್ರದರ್ಶಿಸಿದರು. ಎಲ್ಪಿಜಿ ಸುರಕ್ಷತೆ, ಖಾದ್ಯದ ಗುಣಮಟ್ಟ, ಪ್ರಸ್ತುತಿ ಮತ್ತು ಸ್ವಚ್ಛತೆಯಂತಹ ಮಾನದಂಡಗಳ ಮೇಲೆ ಭಾಗವಹಿಸುವವರನ್ನು ಮೌಲ್ಯಮಾಪನ ಮಾಡುವುದು ಸೇರಿದಂತೆ ತೀರ್ಪುಗಾರರಾಗಿ ಸರೋಜಾ ಬಾಕಳೆ, ಮಧುರ ಕರ್ಣಂ ಸಮಿತಿಯು ಮೌಲ್ಯಮಾಪನ ಮಾಡಿದರು.
ಸ್ಪರ್ಧೆಯ ವಿಜೇತರು : ಪ್ರಥಮ ಬಹುಮಾನ ರವೀನಾ ಬಾಕಳೆ,ದ್ವಿತೀಯ ಬಹುಮಾನ ಶಾಹೀದ ಬೇಗಂ,ತೃತಿಯ ಬಹುಮಾನ ಸಹನಾ ದೀವಟರ,ತುಳಜಾ ಬಾಯಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಥಮದರ್ಜೆ ಗುತ್ತಿಗೆದಾರರಾದ ಎಸ್.ಆರ್ .ನವಲಿ ಹಿರೇಮಠ,ಧಾರವಾಡದ ಬಿಪಿಸಿಎಲ್ ಸೇಫ್ಟಿ ಮ್ಯಾನೇಜರ್ ಮಲ್ಲಿಕಾ ಶಾ,ಭಾರತ್ ಗ್ಯಾಸ್ ಮಾಲೀಕರಾದ ರಾಘವೇಂದ್ರ ಕುಲಕರ್ಣಿ, ಸುಶೀಲೇಂದ್ರ ದೇಶಪಾಂಡೆ ಉಪಸ್ಥಿತರಿದ್ದರು.
Comments are closed.