ಸಮಾಜದ ಓರೆ ಕೋರೆಗಳನ್ನು ತಿದ್ದುವ ವರದಿಗಾರರ ಕಾರ್ಯ ಮೆಚ್ಚಬೇಕಿದೆ-ಶಾಸಕ ದೊಡ್ಡನಗೌಡ ಪಾಟೀಲ್

Get real time updates directly on you device, subscribe now.


ಕುಷ್ಟಗಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕಾರ್ಯ ನಿರ್ವಹಿಸುತ್ತಿದ್ದು ಹೆಮ್ಮೆಯ ವಿಷಯ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಕೆಲಸ ಮಾಡುತ್ತಿರುವ ವರದಿಗಾರರ ಕಾರ್ಯ ಮೆಚ್ಚಬೇಕಿದೆ. ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕವಾದ ಕೆಲಸ ಮಾಡಲಾಗುತ್ತಿದೆ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸರಕಾರದಿಂದ ದೊರೆಯವ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ವಿಮೆ ಸೇರಿ ಇತರೆ ಸೌಲಭ್ಯ ದೊರೆಯುವ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುಲಾಗುವುದು. ರಾಜಕಾರಣಿಗಳ ಸಾರ್ವಜನಿಕರ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಪತ್ರಕರ್ತರು ಜನ ಪ್ರತಿನಿಧಿಗಳಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದು ಸ್ಮರಿಸಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು. ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗೆ ೫೦ ಸಾವಿರ ರೂ.ನೀಡುವದಾಗಿ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು..
ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ ಹಾಗೂ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಾಗೂ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಮಹನಿಯರಿಗೆ ಗೌರವ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.

ಪತ್ರಕರ್ತ ಜಗನ್ನಾಥ ಆರ್.ದೇಸಾಯಿ ಮಾತನಾಡಿ, ವರದಿಗಾರರಿಗೆ ಪ್ರಾಮಾಣಿಕವಾದ ಬದ್ಧತೆ ಇರಬೇಕಿದೆ. ವಿನೂತನ ಕಾಲ ಘಟ್ಟದಲ್ಲಿ ಬೆಳೆಯುತ್ತಿರುವ ವೇಗವಾಗಿ ವರದಿಗಾರರಿಗೆ ಉದ್ಯೋಗ ಅವಕಾಶಗಳಿವೆ. ಇಂದಿನ ದಿನದಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ವಿರಳಾದಿ ವಿರಳ. ಮೊಬೈಲ್, ಸಾಮಾಜಿಕ ಜಾಲತಾಣ, ಫೇಸ್ಬುಕ್, ಗೂಗಲ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಡಿಜಿಟಲ್ ತಂತ್ರಜ್ಞಾನದಲ್ಲಿ ಕಂಪ್ಯೂಟರ್ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ವರದಿಗಾರರು ಓದುಗರ ಪರವಾಗಿ ಕೆಲಸ ಮಾಡಬೇಕು ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್‍ಯಕಾರಣಿ ಸದಸ್ಯ ಜಿ.ಎಸ್.ಗೋನಾಳ ಮಾತನಾಡಿ, ಸಣ್ಣ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುವ ವರದಿಗಾರರು ಯಾವುದೇ ಪಗಾರವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನ ದಿನದಲ್ಲಿ ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್ ಸೌಲಭ್ಯ ಬೇಕಿದೆ ಎಂದು ಹೇಳಿದರು.
ಪತ್ರಕರ್ತರಾದ ವಿಶ್ವನಾಥ ಸೊಪ್ಪಿಮಠ, ನಾಗರಾಜ ವೈ., ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ಬಾಕಳೆ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಅನಿಲ್‌ಕುಮಾರ ಆಲಮೇಲ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ರಾಜ್ಯ ಕಾರ್‍ಯ ಕಾರಣಿ ಸದಸ್ಯ ಎಂ. ಸಾಧಿಕ ಅಲಿ, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ನವದೆಹಲಿ ಐಎಫ್‌ಡಬ್ಲ್ಯೂಡಿ ಸದಸ್ಯರಾದ ವಿ.ಆರ್.ತಾಳಿಕೋಟಿ, ಶ್ರೀನಿವಾಸ ಜಾಹಗೀರದಾರ, ಸಂಗಮೇಶ ಸಿಂಗಾಡಿ, ಬಸವರಾಜ ಪಲ್ಲೇದ್, ಕೆಆರ್‌ಪಿಪಿ ಮುಖಂಡ ಸಿ.ಎಂ.ಹಿರೇಮಠ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷರಾದ ಶಾರದಾ ಶೆಟ್ಟರ್, ಸುಮಾ ಬ್ಯಾಳಿ, ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೆ.ಎಸ್.ರಡ್ಡಿ, ಮುಖಂಡರಾದ ದೇವಿಂದ್ರಪ್ಪ ಬಳೂಟಗಿ, ಬಸವರಾಜ ಹಳ್ಳೂರು ಹಾಗೂ ಪತ್ರಕರ್ತರು ಇನ್ನಿತರರು ಇದ್ದರು.
ದೇಣಿಗೆ ಸಂಗ್ರಹ: ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸಂಘದ ನಿಧಿಗೆ ಪೋಷಕರಾಗಿ ದೇವಿಂದ್ರಪ್ಪ ಬಳೂಟಗಿ ೧೦ ಸಾವಿರ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು ೧೦ ಸಾವಿರ ರೂ. ಡಾ.ಕೆ.ಎಸ್.ರಡ್ಡಿ ೧೫ ಸಾವಿರ ರೂ. ಸುಮಾ ಬ್ಯಾಳಿ ೫ ಸಾವಿರ, ವಿರೇಶ ಬಂಗಾರುಶೆಟ್ರು ೫ ಸಾವಿರ ರೂ. ಬಾಲಾಜಿ ಬಳಿಗಾರ ೫ ಸಾವಿರ ರೂ., ಸಿ.ಎಂ.ಹಿರೇಮಠ ೫ ಸಾವಿರ ರೂ. ದೊಡ್ಡಪ್ಪ ಕಂದಗಲ್ ೫ ಸಾವಿರ ರೂ. ಈ ವೇಳೆಯಲ್ಲಿ ಸಂಘಕ್ಕೆ ದೇಣಿಗೆ ನೀಡಿದರು.
ಮಹನಿಯರಿಗೆ ಸನ್ಮಾನ: ನಾನಾ ಕ್ಷೇತ್ರದಲ್ಲಿ ಸಾಧನೆ ಗೈದ ಸುಮಾರು ೩೦ಕ್ಕೂ ಅಧಿಕ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: