ತುಂಗಭದ್ರಾ ಆಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಹರಿಸಲು ಸಂಸದರಾದ ಕರಡಿ ಸಂಗಣ್ಣ ಒತ್ತಾಯ

Get real time updates directly on you device, subscribe now.

ರೈತರ ಹಿತದೃಷ್ಟಿಯಿಂದಾಗಿ ತುಂಗಭದ್ರಾ ಆಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ವಹಿಸಬೇಕು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಒತ್ತಾಯಿಸಿದ್ದಾರೆ.
ಪ್ರಸ್ತುತ ತುಂಗಭದ್ರಾ ಆಣೆಕಟ್ಟಿಗೆ 76.19 ಟಿಎಂಸಿ ನೀರು ಸಂಗ್ರಹಣೆಯಾಗಿದೆ. ಅಲ್ಲದೇ ನೀರಿನ ಹರಿವು ಉತ್ತಮವಾಗಿದ್ದು, ಮಳೆ ಕೂಡ ಉತ್ತಮವಾಗಿ ಆಗುತ್ತಿರುವುದರಿಂದ ಜಲಾಶಯ ಅತೀ ಶೀಘ್ರದಲ್ಲಿ ಭರ್ತಿಯಾಗಲಿದೆ. ಕೊಪ್ಪಳ, ಬಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಯ ರೈತರಿಗೆ ಇದು ಜೀವ ನದಿಯಾಗಿದ್ದು, ರೈತರು ಈಗಾಗಲೇ ಭತ್ತದ ನಾಟಿಗಾಗಿ ಸಸಿ ಮಡಿಗಳನ್ನು ಸಿದ್ಧಪಡಿಸಿಕೊಂಡು ನೀರಿಗಾಗಿ ಕಾಯುತ್ತಿದ್ದಾರೆ. ಕಾರಣ ತಡ ಮಾಡದೇ ಐಸಿಸಿ ಸಭೆ ಕರೆದು ಇಲ್ಲವೇ ಸರಕಾರದಿಂದ ವಿಶೇಷ ಅನುಮತಿ ಪಡೆದು ನೀರನ್ನು ಕೂಡಲೇ ಕಾಲುವೆಗಳಿಗೆ ಹರಿಸಬೇಕೆಂದು ಅಧಿಕಾರಿಗಳಿಗೆ, ಸಚಿವರಲ್ಲಿ ಮತ್ತು ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: